ಎಸ್ಆರ್ಕೆ ಕ್ರೇಜ್: ಚಿತ್ರಮಂದಿರಗಳೆದುರು 'ಡಂಕಿ' ಹಬ್ಬಾಚರಣೆ; ಸೆಲೆಬ್ರೇಶನ್ ವಿಡಿಯೋ ನೋಡಿ - ಡಂಕಿ ಸೆಲೆಬ್ರೇಶನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/21-12-2023/640-480-20321680-thumbnail-16x9-newsss.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Dec 21, 2023, 12:57 PM IST
ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 2023 ಅನ್ನು ಪಠಾಣ್ ಸಿನಿಮಾದೊಂದಿಗೆ ಪ್ರಾರಂಭಿಸಿದರು. ಜವಾನ್ ಮೂಲಕ ಸದ್ದು ಮಾಡಿದರು. ಡಂಕಿ ಸಿನಿಮಾದ ಯಶಸ್ಸಿನ ಮೂಲಕ ಈ ವರ್ಷಾಂತ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಜ್ಜಾಗಿದ್ದಾರೆ. ಇಂದು ಬಹುನಿರೀಕ್ಷಿತ ಡಂಕಿ ಸಿನಿಮಾ ತೆರೆಗಪ್ಪಳಿಸಿದ್ದು, ಅಭಿಮಾನಿಗಳ ಉತ್ಸಾಹ ವರ್ಣನಾತೀತ.
ಡಂಕಿ ಸಿನಿಮಾವನ್ನು ಶಾರುಖ್ ಅಭಿಮಾನಿಳು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಉತ್ಸಾಹಭರಿತ ಆಚರಣೆಗಳ ಮೂಲಕ ಸಿನಿಪ್ರಿಯರು ಸದ್ದು ಮಾಡಿದ್ದಾರೆ. ಕ್ರಿಸ್ಮಸ್ ಸಂದರ್ಭ ಸಿನಿಮಾ ತೆರೆಕಂಡ ಹಿನ್ನೆಲೆ, ಥಿಯೇಟರ್ ಬಳಿ ಕ್ರಿಸ್ಮಸ್ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಡೋಲು ಬಾರಿಸುವುದರಿಂದ ಹಿಡಿದು, ಪಟಾಕಿ ಸಿಡಿಸೋವರೆಗಿನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಂತಾ ಕ್ಲಾಸ್ನಂತೆ ಹಲವರು ರೆಡಿಯಾಗಿ ಬಂದಿದ್ದರು. ಹೆಚ್ಚಿನ ಸಂಖ್ಯೆಯ ಶಾರುಖ್ ಫ್ಯಾನ್ಸ್ ಕ್ರಿಸ್ಮಸ್ ಟೋಪಿ ಧರಿಸಿ ಕ್ರಿಸ್ಮಸ್ ಬ್ಬದ ವಾತಾವರಣ ಸೃಷ್ಟಿಸಿದ್ದರು. ವಿವಿಧ ನಗರಗಳಲ್ಲಿ ಮುಂಜಾನೆ ಪ್ರದರ್ಶನಗಳು ನಿಗದಿಯಾಗಿದ್ದವು. ಮಾರ್ನಿಂಗ್ ಶೋನಲ್ಲೇ ಥಿಯೇಟರ್ಗಳು ತುಂಬಿ ತುಳುಕುತ್ತಿತ್ತು. ಬಾಂದ್ರಾದಲ್ಲಿನ ಗೈಟಿ ಗ್ಯಾಲಕ್ಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಸೇರಿದ್ದರು. ಫ್ಯಾನ್ಸ್ ಸೆಲೆಬ್ರೇಶನ್ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಡಂಕಿ ತೆರೆಗೆ: ಸಿನಿಪ್ರಿಯರು ಹೀಗಂದ್ರು! ಹೀಗಿದೆ ಸೋಷಿಯಲ್ ಮೀಡಿಯಾದ ಚಿತ್ರ ವಿಮರ್ಶೆ !