ವಿಡಿಯೋ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ 'ಆದಿಪುರುಷ್' ಪ್ರಭಾಸ್​​ - ಪ್ರಭಾಸ್

🎬 Watch Now: Feature Video

thumbnail

By

Published : Jun 6, 2023, 3:49 PM IST

ತಿರುಪತಿ (ಆಂಧ್ರಪ್ರದೇಶ): ಆದಿಪುರುಷ್​ ಸಿನಿಮಾ​ ಪ್ರೀ ರಿಲೀಸ್ ಈವೆಂಟ್​ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ ಅದ್ಧೂರಿಯಾಗಿ ಸಮಾರಂಭ ಜರುಗಲಿದೆ. ಅದಕ್ಕೂ ಮುನ್ನ, ಚಿತ್ರದ ಪ್ರಮುಖ ನಟ ಪ್ರಭಾಸ್ ಅವರು​​ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

'ಆದಿಪುರುಷ್​​' ಇದೇ ಜೂನ್​ 16ರಂದು ತೆರೆಕಾಣಲಿರುವ ಬಹುನಿರೀಕ್ಷಿತ ಚಿತ್ರ. ಲೋಕ ಪ್ರಸಿದ್ಧ ಮಹಾಕಾವ್ಯ ರಾಮಾಯಣ ಆಧರಿಸಿರುವ ಪೌರಾಣಿಕ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಪ್ರೇಕ್ಷಕರ ನಿರೀಕ್ಷೆ ತಲುಪಲು ಚಿತ್ರತಂಡ ಕೂಡ ಬಹಳ ಶ್ರಮ ವಹಿಸಿದ್ದು, ಬಿಗ್​ ಬಜೆಟ್​​ನಲ್ಲಿ 'ಆದಿಪುರುಷ್​​' ನಿರ್ಮಾಣವಾಗಿದೆ.

ಓಂ ರಾವುತ್ ನಿರ್ದೇಶನದ ಸಿನಿಮಾದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದರೆ, ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ, ಚಿತ್ರದ ​ಪ್ರಮುಖ ಪಾತ್ರಗಳಾದ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಲಕ್ಷ್ಮಣ ಪಾತ್ರದಲ್ಲಿ ಸನ್ನಿ ಸಿಂಗ್ ಅಭಿನಯಿಸಿದ್ದಾರೆ. ಸಂಜೆ ನಡೆಯಲಿರುವ ಅದ್ಧೂರಿ ಪ್ರೀ ರಿಲೀಸ್​ ಈವೆಂಟ್​ನಲ್ಲಿ ಚಿತ್ರದ 2ನೇ ಟ್ರೇಲರ್​ ಕೂಡ ಅನಾವರಣಗೊಳ್ಳಲಿದೆ. ಸಿನಿಮಾ ಯಶಸ್ಸು ಕಾಣಲೆಂದು ಪ್ಯಾನ್​​ ಇಂಡಿಯಾ ಸ್ಟಾರ್ ಪ್ರಭಾಸ್​​ ತಿರುಪತಿ ತಿಮ್ಮಪ್ಪನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.  

ಇದನ್ನೂ ಓದಿ: ಹಿಂದೆಂದೂ ನಡೆಯದಿರುವಂತೆ 'ಆದಿಪುರುಷ್​​' ಪ್ರೀ ರಿಲೀಸ್ ಸಮಾರಂಭಕ್ಕೆ ತಯಾರಿ: ಏನಿದರ ವಿಶೇಷತೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.