thumbnail

ಇಸ್ರೇಲ್​ನಿಂದ ಭಾರತಕ್ಕೆ ಮರಳಿದ ನಟಿ.. ಮುಂಬೈ ಏರ್​ಪೋರ್ಟ್​ಗೆ ಬಂದಿಳಿದ ನುಶ್ರತ್ ಭರುಚಾ

By ETV Bharat Karnataka Team

Published : Oct 8, 2023, 5:31 PM IST

ಶನಿವಾರ ಇಸ್ರೇಲ್ ಮೇಲೆ ಪ್ಯಾಲೆಸ್ಟೇನ್​ನ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. ಸಾಗರೋತ್ತರ ಪ್ರದೇಶದಲ್ಲಿ ಭಾರತೀಯ ನಟಿ ನುಶ್ರತ್ ಭರುಚಾ ಸಿಲುಕಿಕೊಂಡಿದ್ದರು. ಈ ವಿಚಾರ ತಿಳಿದ ಅಭಿಮಾನಿಗಳು ಬಹಳಾನೇ ಆತಂಕಕ್ಕೊಳಗಾಗಿದ್ದರು. ಅದೃಷ್ಟವಶಾತ್​​ ನಟಿ ಸುರಕ್ಷಿತವಾಗಿ ಭಾರತಕ್ಕೆ ಮರಳುತ್ತಿದ್ದಾರೆ ಎಂದು ನಟಿಯ ತಂಡ ಮಾಹಿತಿ ಕೊಟ್ಟಿತ್ತು. ಅಂತಿಮವಾಗಿ ಭರುಚಾ ದೇಶಕ್ಕೆ ಬಂದಿಳಿದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನುಶ್ರತ್ ಭರುಚಾ ಕಾಣಿಸಿಕೊಂಡಿದ್ದು, ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 7 ರ ವರೆಗೆ ಆಯೋಜಿಸಲಾಗಿದ್ದ ಹೈಫಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿ ಆಗುವ ಸಲುವಾಗಿ ನಟಿ ಇಸ್ರೇಲ್‌ ದೇಶಕ್ಕೆ ತೆರಳಿದ್ದರು. ಆದ್ರೆ ಹಮಾಸ್​ ಉಗ್ರರು ದಾಳಿ ನಡೆಸಿದ ಹಿನ್ನೆಲೆ, ಯುದ್ಧದ ವಾತಾವರಣ ನಿರ್ಮಾಣಗೊಂಡಿದೆ. ಸಾವು ನೋವಿನ ಸಂಖ್ಯೆ ಏರುತ್ತಿದೆ. ಆದ್ರೆ ರಾಯಭಾರ ಕಚೇರಿ ಸಹಾಯದಿಂದ ಭಾರತೀಯ ನಟಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ನುಶ್ರತ್ ಭರುಚಾ ವಿಡಿಯೋ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಬಿಗ್​ ಬಾಸ್ ಸೀಸನ್​ 10: ಗ್ರ್ಯಾಂಡ್​ ಈವೆಂಟ್​ಗೆ ಕ್ಷಣಗಣನೆ - ಸ್ಪರ್ಧಿಗಳ್ಯಾರಿರಬಹುದು?

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.