thumbnail

ಮುಖೇಶ್ ಅಂಬಾನಿ ಮೊಮ್ಮಕ್ಕಳ ಬರ್ತ್​ಡೇ ಪಾರ್ಟಿಯಲ್ಲಿ ಖ್ಯಾತ ಸೆಲೆಬ್ರಿಟಿಗಳು ಭಾಗಿ - ವಿಡಿಯೋ

By ETV Bharat Karnataka Team

Published : Nov 18, 2023, 9:09 PM IST

Updated : Nov 18, 2023, 9:21 PM IST

ಮುಂಬೈ: ಇಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವಳಿ ಮೊಮ್ಮಕ್ಕಳಾದ ಆದಿಯಾ ಮತ್ತು ಕೃಷ್ಣ ಜನ್ಮದಿನ. ಇಶಾ ಅಂಬಾನಿ ಮತ್ತು ಆನಂದ್​ ಪಿರಮಾಲ್ ದಂಪತಿ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಪಾರ್ಟಿ ಆಯೋಜಿಸಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ತಾರೆಯರು ಈವೆಂಟ್​ಗೆ ಆಗಮಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.     

ಮುಖೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ಮೊಮ್ಮಕ್ಕಳನ್ನು ಎತ್ತಿಕೊಂಡು ಕ್ಯಾಮರಾಗೆ ಪೋಸ್​ ನೀಡಿರುವುದನ್ನು ವಿಡಿಯೋಗಳಲ್ಲಿ ಕಾಣಬಹುದು. ಇಶಾ ಅಂಬಾನಿ ಮತ್ತು ಆನಂದ್​ ಪಿರಾಮಲ್ ದಂಪತಿ ಜೊತೆಯಾಗಿ ಪಾರ್ಟಿಯತ್ತ ತೆರಳುತ್ತಿರುವುದನ್ನು ನೋಡಬಹುದು. ಬಾಲಿವುಡ್​ ಖ್ಯಾತ ನಿರ್ದೇಶಕ ಕರಣ್​ ಜೋಹರ್​ ತಮ್ಮಿಬ್ಬರು ಮಕ್ಕಳಾದ ಯಶ್​ ಮತ್ತು ರೂಹಿ ಜೊತೆ ಈವೆಂಟ್​ಗೆ ಆಗಮಿಸಿದ್ದಾರೆ. ಇನ್ನೂ ಅನೇಕ ಗಣ್ಯರು ಪಾರ್ಟಿಗೆ ಬರುತ್ತಿದ್ದಾರೆ.

ಇಶಾ ಅಂಬಾನಿ ಮತ್ತು ಆನಂದ್​ ಪಿರಾಮಲ್ 2018ರ ಸೆಪ್ಟೆಂಬರ್​ ತಿಂಗಳಲ್ಲಿ ಇಟಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಡಿಸೆಂಬರ್​ 12ರಂದು ದಾಂಪತ್ಯಕ್ಕೆ ಕಾಲಿಟ್ಟರು. 2022ರ ನವೆಂಬರ್​ 18ರಂದು ಇಬ್ಬರು ಅವಳಿ ಮಕ್ಕಳನ್ನು ಸ್ವಾಗತಿಸಿದರು. ಹೆಣ್ಣು ಮಗುವಿಗೆ ಆದಿಯಾ ಮತ್ತು ಗಂಡು ಮಗುವಿಗೆ ಕೃಷ್ಣ ಎಂದು ನಾಮಕರಣ ಮಾಡಿದರು. 

ಇದನ್ನೂ ಓದಿ: ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲದಲ್ಲಿ ಮುಖೇಶ್ ಅಂಬಾನಿ ಕುಟುಂಬದಿಂದ ಪೂಜೆ- ವಿಡಿಯೋ

Last Updated : Nov 18, 2023, 9:21 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.