ದೇವಿಯ ರಥೋತ್ಸವದ ವೇಳೆ ಬಾಳೆಹಣ್ಣಿನಲ್ಲಿ ಕನ್ಯೆಗೆ ಬೇಡಿಕೆ ಇಟ್ಟ ರೈತ
🎬 Watch Now: Feature Video
ಬಳ್ಳಾರಿ: ಪ್ರಸ್ತುತ ದಿನಮಾನಗಳಲ್ಲಿ ರೈತರಿಗೆ ಕನ್ಯೆ ಕೊಡಲು ಹಿಂದೇಟು ಹಾಕುವವರೇ ಹೆಚ್ಚು. ಯುವ ರೈತರು ಹೊಲದಲ್ಲಿ ದುಡಿದು ದುಪ್ಪಟ್ಟು ಹಣಗಳಿಸಿ ರಾಣಿಯಂತೆ ನೋಡಿಕೊಳ್ಳುವುದಾಗಿ ಹೇಳಿದರೂ ಅನೇಕ ಹೆಣ್ಣುಮಕ್ಕಳು ಮದುವೆಯಾಗಲು ಒಪ್ಪುತ್ತಿಲ್ಲ. ಇದರಿಂದ ನೊಂದ ಯುವ ರೈತನೊಬ್ಬ ಹಗರಿಬೊಮ್ಮನಹಳ್ಳಿ ತಾಲೂಕು ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದ ವೇಳೆ, "ರೈತರಿಗೆ ಕನ್ಯೆ ಕೊಡುವಂತಾಗಲಿ" ಎಂದು ಬಾಳೆ ಹಣ್ಣಿನಲ್ಲಿ ಬರೆದು ಹರಕೆ ತೀರಿಸುವಂತೆ ಬೇಡಿಕೊಂಡಿದ್ದಾನೆ. ಇಷ್ಟೇ ಅಲ್ಲ, "ಹೆಣ್ಣು ಹೆತ್ತವರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡುವಂತಾಗಲಿ" ಎಂದು ಬರೆದು ಪ್ರಾರ್ಥಿಸಿದ್ದಾನೆ.
ಇದನ್ನೂಓದಿ:ಎಲೆಕ್ಟ್ರಾನಿಕ್ಸ್ ಅಂಗಡಿ, ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆಯ ಮೇಲ್ಮಹಡಿಯಲ್ಲಿ ಅಗ್ನಿ ಅವಘಡ
Last Updated : Feb 3, 2023, 8:40 PM IST