ಹೈದರಾಬಾದ್ನಲ್ಲಿ ಸಿನಿಪ್ರಿಯರೊಂದಿಗೆ ಲೈಗರ್ ವೀಕ್ಷಿಸಿದ ವಿಜಯ್ ದೇವರಕೊಂಡ - ಅನನ್ಯಾ ಪಾಂಡೆ - Ligar collection
🎬 Watch Now: Feature Video

ಹೈದರಾಬಾದ್: ನಟ ವಿಜಯ್ ದೇವರಕೊಂಡ, ನಟಿ ಅನನ್ಯಾ ಪಾಂಡೆ ಅಭಿನಯದ ಬಹು ನಿರೀಕ್ಷಿತ ಲೈಗರ್ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಜಗತ್ತಿನಾದ್ಯಂತ ಇಂದು ಅದ್ಧೂರಿಯಾಗಿ ತೆರೆ ಕಂಡಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್ನ ಆರ್ಟಿಸಿ ಕ್ರಾಸ್ ರಸ್ತೆಯಲ್ಲಿರುವ ಸುದರ್ಶನ್ ಥಿಯೇಟರ್ಗೆ ಭೇಟಿ ನೀಡಿದ ಚಿತ್ರದ ನಾಯಕ, ನಟಿ ಅಭಿಮಾನಿಗಳೊಂದಿಗೆ ಕುಳಿತು ಚಿತ್ರ ವೀಕ್ಷಿಸಿದರು. ಚಿತ್ರ ಮಂದಿರದ ಎದುರು ಜನಸಾಗರವಿತ್ತು. ಅಭಿಮಾನಿಗಳು ಚಿತ್ರವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದರು.
Last Updated : Feb 3, 2023, 8:27 PM IST