ಹಾವೇರಿಯಲ್ಲಿ ಅಬ್ಬರಿಸಿದ ಹೆಬ್ಬುಲಿ: ಬಿಜೆಪಿ ಪರ ಸುದೀಪ್ ಮತಬೇಟೆ - Sudeep bjp campaign
🎬 Watch Now: Feature Video
ಹಾವೇರಿ: ಬುಧವಾರದಂದು ಅಭಿನಯ ಚಕ್ರವರ್ತಿ ಸುದೀಪ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದ್ದಾರೆ. ನಿರೀಕ್ಷೆಯಂತೆ ಇಂದು ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಪರ ಮತಬೇಟೆ ನಡೆಸಿದರು. ಜಿಲ್ಲೆಯ ಎರಡು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ರೋಡ್ ಶೋ ಅದ್ಧೂರಿಯಾಗಿ ನಡೆಯಿತು.
ಮೊದಲು ರಾಣೆಬೆನ್ನೂರಿಗೆ ಆಗಮಿಸಿದ ಸುದೀಪ್ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಪರ ಮತಯಾಚನೆ ಮಾಡಿದರು. ನಗರದ ಮೆಡ್ಲೇರಿ ಚೌಡೇಶ್ವರಿ ದೇವಸ್ಥಾನದಿಂದ ಚೌಡೇಶ್ವರಿ ದ್ವಾರಗೋಪುರದವರೆಗೆ ಬೃಹತ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದರು. ಅರುಣ್ ಕುಮಾರ್ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ. ರಾಣೆಬೆನ್ನೂರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತ್ತೊಮ್ಮೆ ಅರುಣ್ ಕುಮಾರ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.
ನಂತರ ಹಿರೇಕೆರೂರಿಗೆ ಆಗಮಿಸಿದ ಕಿಚ್ಚ ಸುದೀಪ್ ಕೌರವ ಖ್ಯಾತಿಯ ಬಿ.ಸಿ. ಪಾಟೀಲ್ ಪರ ಮತಯಾಚನೆ ಮಾಡಿದರು. ಶಂಕರರಾವ್ ವೃತ್ತದಿಂದ ಆರಂಭವಾದ ರೋಡ್ ಶೋ ಸರ್ವಜ್ಞ ವೃತ್ತದವರೆಗೆ ನಡೆಯಿತು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಕೌರವ ಬಿ.ಸಿ. ಪಾಟೀಲ್ ಪರ ಮತಯಾಚಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಹಾಕಿದರು.
ಇದನ್ನೂ ಓದಿ: ಹೆಬ್ಬುಲಿಯ ಅಬ್ಬರದ ಪ್ರಚಾರ: ಅಭಿಮಾನಿಗಳ ಘೋಷಣೆಗಳ ನಡುವೆ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ