ಪರಭಾಷಾ ಚಿತ್ರಗಳಿಗೆ ದುಬಾರಿ ಟಿಕೆಟ್ ದರ: ನಟ ಶಿವ ರಾಜ್‌ಕುಮಾರ್ ಹೇಳಿದ್ದೇನು?- ವಿಡಿಯೋ - ETV Bharat Karnataka
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/27-10-2023/640-480-19875245-thumbnail-16x9-mh.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 27, 2023, 10:12 PM IST
ಬೆಂಗಳೂರು: ಕಳೆದ ವಾರ ಶಿವ ರಾಜ್‌ಕುಮಾರ್ ಅಭಿನಯದ 'ಘೋಸ್ಟ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಇದೇ ವೇಳೆ ತಮಿಳಿನ ‘ಲಿಯೋ’, ತೆಲುಗಿನ ‘ಟೈಗರ್ ನಾಗೇಶ್ವರ್ ರಾವ್’ ಮತ್ತು ‘ಭಗವಂತ್ ಕೇಸರಿ’ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿವೆ. ಹೀಗಾಗಿ, ಘೋಸ್ಟ್ಗೆ ಸಿಗಬೇಕಿದ್ದ ಚಿತ್ರಮಂದಿರಗಳು ಕಡಿಮೆಯಾದವು. ಇತ್ತೀಚೆಗೆ ನಡೆದ ಘೋಸ್ಟ್ ಸಿನಿಮಾ ಸಕ್ಸಸ್ ಮೀಟ್ನಲ್ಲಿ ಶಿವಣ್ಣ ಈ ಬಗ್ಗೆ ಮೌನ ಮುರಿದರು. ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ದುಬಾರಿ ಟಿಕೆಟ್ ದರ ಇರುವ ಬಗ್ಗೆ ಮಾತನಾಡಿದರು.
ಟಿಕೆಟ್ ದರ ಹೆಚ್ಚೂ, ಕಡಿಮೆ ಮಾಡುವ ವಿಚಾರದಲ್ಲಿ ಸರ್ಕಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದವರು ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಸರ್ಕಾರಗಳು ಎಲ್ಲಾ ಸಿನಿಮಾಗಳಿಗೂ ಸಮಾನ ಟಿಕೆಟ್ ದರ ನಿಗದಿಪಡಿಸಿವೆ. ಅದೇ ರೀತಿ ಯಾವುದೇ ಬೇದಭಾವ ಇಲ್ಲದೇ ಕೇವಲ ಸ್ಟಾರ್ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಿಸದೇ, ಎಲ್ಲ ಸಿನಿಮಾಗಳಿಗೂ ಒಂದೇ ರೀತಿಯ ಟಿಕೆಟ್ ದರ ನಿಗದಿ ಮಾಡಬೇಕು. ಸ್ವಲ್ಪ ತಡವಾದರೂ ಪರವಾಗಿಲ್ಲ, ಲೇಟೆಸ್ಟ್ ಆಗಿ ಮಾಡೋಣ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ನಿರ್ದೇಶಕನ ಕ್ಯಾಪ್ ತೊಟ್ಟ ನಟ ಅರುಣ್ ಕುಮಾರ್; 'ನೆಲ್ಸನ್' ಆದ್ರು ವಿನೋದ್ ಪ್ರಭಾಕರ್