Kiccha Sudeep: ಮೈಸೂರು ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್​ ಭೇಟಿ, ಅಭಿಮಾನಿಗಳ ನೂಕುನುಗ್ಗಲು - ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟ

🎬 Watch Now: Feature Video

thumbnail

By

Published : Jun 13, 2023, 6:36 PM IST

ಮೈಸೂರು: ನಟ ಕಿಚ್ಚ ಸುದೀಪ್​ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಇಂದು ಭೇಟಿ ನೀಡಿದರು. ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ನೆಚ್ಚಿನ ನಟನನ್ನು ಕಾಣಲು ಅನೇಕ ಅಭಿಮಾನಿಗಳು ದೇವಸ್ಥಾನಕ್ಕೆ ಆಗಮಿಸಿದ್ದರು. ಸುದೀಪ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್​ ಮುಗಿಬಿದ್ದರು. ಅವರನ್ನು ದೂರ ಸರಿಸಲು ಪೊಲೀಸರು ಹರಸಾಹಸಪಟ್ಟರು.

ಕಿಚ್ಚ ಸುದೀಪ್ 46ನೇ ಸಿನಿಮಾ: ಕಿಚ್ಚ ಸುದೀಪ್​ ಅವರ 46ನೇ ಸಿನಿಮಾ ಅಪ್​ಡೇಟ್​ ಈಗಾಗಲೇ ಅಭಿಮಾನಿಗಳಿಗೆ ಸಿಕ್ಕಿದೆ. ಕಿಚ್ಚನ ಹೊಸ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ತನು ನಿರ್ಮಾಣ ಮಾಡಲಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ವಿ. ಕ್ರಿಯೇಷನ್ಸ್ ಸುದೀಪ್​ ಮುಂದಿನ ಚಿತ್ರದ ಜವಾಬ್ದಾರಿ ಹೊತ್ತಿದೆ. ಇನ್ನೂ ಇತ್ತೀಚೆಗೆ ಪುಟ್ಟದಾದ ಟೀಸರ್ ಹೊರ ಬಂದ ಬೆನ್ನಲ್ಲೇ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: Raj B Shetty’s Toby: ರಾಜ್‌ ಬಿ ಶೆಟ್ರ 'ಟೋಬಿ' ಮೋಷನ್​ ಪೋಸ್ಟರ್​ ಔಟ್​; ಸಿನಿಮಾ ಬಿಡುಗಡೆ ದಿನವೂ ಫಿಕ್ಸ್‌

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.