'ಪ್ರತೀ ಶುಕ್ರವಾರ ನಟರ ಭವಿಷ್ಯ ನಿರ್ಧಾರವಾಗುತ್ತದೆ': ಅಭಿಷೇಕ್ ಬಚ್ಚನ್ - ಘೂಮರ್ ಸಿನಿಮಾ
🎬 Watch Now: Feature Video
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ಘೂಮರ್. ಶುಕ್ರವಾರ ಮುಂಬೈನಲ್ಲಿ ಟ್ರೇಲರ್ ರಿಲೀಸ್ ಈವೆಂಟ್ ನಡೆಯಿತು. ಮಾಧ್ಯಮದವರ ಜೊತೆ ಸಂವಾದದ ವೇಳೆ ಬಿಗ್ ಬಿ ಪುತ್ರ 'ಬಾಕ್ಸ್ ಆಫೀಸ್ ಚಂಚಲ ಸ್ವಭಾವ'ದ ಬಗ್ಗೆ ಮಾತನಾಡಿದರು.
ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಏರಿಳಿತ ಕಂಡಿರುವ ಜೂನಿಯರ್ ಬಚ್ಚನ್, ಪ್ರತೀ 'ಶುಕ್ರವಾರ'ವು ಮನರಂಜನಾ ಉದ್ಯಮದಲ್ಲಿರುವ ಪ್ರತಿಯೊಬ್ಬರ ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಘೂಮರ್ ಸಿನಿಮಾ ಇದೇ ಆಗಸ್ಟ್ 18ರಂದು ತೆರೆ ಕಾಣಲಿದೆ. ಮೂರನೇ ಬಾರಿಗೆ ನಟಿ ಸೈಯಾಮಿ ಖೇರ್ ಅವರು ಅಭಿಷೇಕ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಬಚ್ಚನ್ ಅವರೊಂದಿಗೆ ಅದ್ಭುತ ಸಮಯ ಕಳೆದಿದ್ದೇನೆ ಎಂದು ನಟಿ ತಿಳಿಸಿದ್ದಾರೆ.
ಈವೆಂಟ್ನಲ್ಲಿ ಹಾಜರಿದ್ದ ನಿರ್ದೇಶಕ ಆರ್ ಬಾಲ್ಕಿ ಮಾತನಾಡಿ, ಘೂಮರ್ ಕಥೆ ಕ್ರಿಕೆಟ್ ಮೇಲೆ ಕೇಂದ್ರೀಕೃತವಾಗಿಲ್ಲ. ಆದ್ರೆ ಕ್ರೀಡೆ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿ ಕಾಣಿಸುತ್ತದೆ ಎಂದು ತಿಳಿಸಿದ್ದಾರೆ. ಅಭಿಷೇಕ್ ಬಚ್ಚನ್ ತಂದೆ, ಹಿರಿಯ, ಪ್ರಸಿದ್ಧ ನಟ ಅಮಿತಾಭ್ ಬಚ್ಚನ್, ಶಬಾನಾ ಅಜ್ಮಿ, ಅಂಗದ್ ಬೇಡಿ ಕೂಡ ಚಿತ್ರದಲ್ಲಿ ನಟಿಸಿದ್ದು, ಸಿನಿಮಾ ಆಗಸ್ಟ್ 18ರಂದು ತೆರೆ ಕಾಣಲಿದೆ.
ಇದನ್ನೂ ಓದಿ: Ghoomer Trailer: ಇತಿಮಿತಿ ಮೆಟ್ಟಿ ನಿಂತು ಕ್ರಿಕೆಟ್ ಸಾಧನೆ - ಬಲಗೈ ಇಲ್ಲದಿದ್ದರೇನಂತೆ? ಎಡಗೈಯಲ್ಲೇ ಬೌಲಿಂಗ್!