ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ: ಗಮನ ಸೆಳೆದ ಗಂಡು ಕಲೆಗಳ ಪ್ರದರ್ಶನ - 26th National Youth Festival in dharawad
🎬 Watch Now: Feature Video
ಧಾರವಾಡ: 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಯುವ ಪ್ರತಿಭೆಗಳು ಸ್ಥಳೀಯ ಕ್ರೀಡೆಗಳ ಪ್ರದರ್ಶನ ನೀಡಿದರು. ಧಾರವಾಡದ ಆರ್ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಪ್ರದರ್ಶನ ನೀಡಲು ಆಗಮಿಸಿದ ಎಲ್ಲ ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡಿದರು. ಪಂಜಾಬ್ ರಾಜ್ಯದ ಯುವಕರು ಯುದ್ಧ ಕಲೆಯಾದ ಗಟ್ಕಾ ಪ್ರದರ್ಶನ ನೀಡಿದರು. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಿಂದ ಮಲ್ಲಕಂಬ, ತೆಲಂಗಾಣದ ಕಬ್ಬಡ್ಡಿ, ಕೇರಳದ ಕಳರಿ ಪಯಟ್ಟು, ಮಣಿಪುರದ ಮುಕ್ನಾ ತಂಗ್ಯಾ, ಅಸ್ಸೋಂ ರಾಜ್ಯದ ಬೊಮ್ಲೆನೈ, ಆಂಧ್ರ ರಾಜ್ಯದಿಂದ ಕರ ಸಾನ ಹಾಗೂ ಕಟ್ಟಿ ಸಾಮ್, ತಮಿಳುನಾಡಿನ ಸಿಲಂಬನ್, ಜಮ್ಮು ಕಾಶ್ಮೀರ ರಾಜ್ಯದ ಕಬ್ಬಡ್ಡಿ, ಸೇರಿದಂತೆ ವಿವಿಧ ರಾಜ್ಯಗಳ ಸ್ಥಳೀಯ ಕ್ರೀಡೆಗಳ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.
ಇದನ್ನೂ ಓದಿ:ರಾಷ್ಟ್ರೀಯ ಯುವಜನೋತ್ಸವ: ಜಲಕ್ರೀಡೆಯಲ್ಲಿ ಭಾಗವಹಿಸಿ ಸಂತಸಪಟ್ಟ ಯುವ ಜನರು..