ಕೊರೊನಾ ಕಟ್ಟೆಚ್ಚರ: ಕೋಲಾರದಲ್ಲಿ ಕೆಮಿಕಲ್ ಸಿಂಪಡಿಸಿದ ಸಂಸದ ಮುನಿಸ್ವಾಮಿ - ಸಂಸದ ಎಸ್.ಮುನಿಸ್ವಾಮಿ
🎬 Watch Now: Feature Video
ಕೋಲಾರ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಂಸದ ಎಸ್. ಮುನಿಸ್ವಾಮಿ ಅವರು ಸ್ವತಃ ನಗರದಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ರು. ಅಗ್ನಿ ಶಾಮಕ ದಳ ಹಾಗೂ ನಗರಸಭೆ ವತಿಯಿಂದ ನಗರದೆಲ್ಲೆಡೆ ಇಂದು ಕೆಮಿಕಲ್ ಸಿಂಪಡಿಸಲಾಗುತ್ತಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಂಸದರು ಅಗ್ನಿ ಶಾಮಕ ದಳದ ವಾಟರ್ಗನ್ ಹಿಡಿದು, ನಗರ ಹೊರವಲಯದ ಎಪಿಎಂಸಿ ಮಾರುಕಟ್ಟೆ ಹಾಗೂ ನಗರದ ಎಂ.ಜಿ. ರಸ್ತೆಯಲ್ಲಿ ಸ್ವತಃ ತಾವೇ ಔಷಧಿ ಸಿಂಪಡಿಸಿದ್ರು. ನಗರದ ಎಲ್ಲಾ ಬೀದಿಗಳಲ್ಲಿಯೂ ನೈರ್ಮಲ್ಯ ಕಾಪಾಡಬೇಕೆಂದು ನಗರಸಭೆ ಅಧಿಕಾರಿಗಳಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೂಚನೆ ನೀಡಿದ್ರು.