ಮುಸ್ಲಿಮರಿಲ್ಲದ ಈ ಊರಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ! - ಮುಸ್ಲಿಮರಿಲ್ಲದ ಊರಲ್ಲಿ ಹಿಂದೂಗಳಿಂದಲೇ ಮೊಹರಂ ಆಚರಣೆ
🎬 Watch Now: Feature Video
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಹಿಂದುಗಳೇ ತ್ಯಾಗ ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಿದರು. ಸಂಪ್ರದಾಯದ ಪ್ರಕಾರ ಪಕ್ಕದ ಗ್ರಾಮದಿಂದ ಮುಲ್ಲಾನನ್ನ ಕರೆಸಿಕೊಂಡಿದ್ದ ಗ್ರಾಮಸ್ಥರು ವಿಧಿವಿಧಾನಗಳಂತೆ ಮೊಹರಂ ಆಚರಿಸಿದರು. ಪಾಂಜಾಗಳನ್ನು ಹಿಡಿದು ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲಾ ಪಾಲ್ಗೊಂಡು ಭಕ್ತಿಭಾವ ಮೆರೆದರು.