ಕೃಷಿ ಕ್ಷೇತ್ರಕ್ಕೆ ನಿರಾಶಾದಾಯಕ ಬಜೆಟ್: ಕುರುಬೂರು ಶಾಂತಕುಮಾರ್​​​ - ಕೇಂದ್ರ ಬಜೆಟ್​​2020

🎬 Watch Now: Feature Video

thumbnail

By

Published : Feb 1, 2021, 4:19 PM IST

Updated : Feb 1, 2021, 5:32 PM IST

ಬೆಂಗಳೂರು: ಕೇಂದ್ರ ಬಜೆಟ್ ರೈತರ ಪಾಲಿಗೆ ನಿರಾಶಾದಾಯಕವಾಗಿದೆ ಎಂದು ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಬಜೆಟ್ ರೈತನ ಪಾಲಿಗೆ ಹೆಚ್ಚು ಉಪಯೋಗಕಾರಿಯಲ್ಲ, ರೈತನ ಮೂಗಿಗೆ ತುಪ್ಪ ಸವರುವ ಕೆಲಸ ಅಷ್ಟೆ. ಕೃಷಿಗೆ ಬೆಂಬಲ ಬೆಳೆ ಘೋಷಣೆ ಬಗ್ಗೆ ತಿಳಿಸಿದ್ದಾರೆ. ಆದರೆ, ಮಾನದಂಡ ಸರಿಯಿಲ್ಲ. 3 ಕೃಷಿ ವಿರೋಧಿ ಕಾನೂನು ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ, ರೈತರ ಆದಾಯ ದ್ವಿಗುಣ ಮಾಡುವ ಬಗ್ಗೆ ಸ್ಪಷ್ಟ ಯೋಜನೆಗಳ ಮಾಹಿತಿ ಇಲ್ಲ. ಒಟ್ಟಾರೆ ಇದು ಭರವಸೆ ಇಲ್ಲದ ಕೃಷಿ ಕ್ಷೇತ್ರಕ್ಕೆ ನಿರಾಶಾದಾಯಕ ಬಜೆಟ್ ಎಂದು ಹೇಳಿದರು.
Last Updated : Feb 1, 2021, 5:32 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.