ಸಿಡಿ ಪ್ರಕರಣದ ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ.. 'ನೋ ಕಮೆಂಟ್ಸ್'ಎಂದ ಬೊಮ್ಮಾಯಿ - ಸಿಡಿ ಪ್ರಕರಣ ಕುರಿತು ಬಸವರಾಜ ಬೊಮ್ಮಾಯಿ ಹೇಳಿಕೆ
🎬 Watch Now: Feature Video
ಮಂಗಳೂರು : ಸಿಡಿ ಪ್ರಕರಣದ ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬರೆದ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಿರಾಕರಿಸಿದರು. ನಗರದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಅವರು, ಎಸ್ಐಟಿ ಡಿವೈಎಸ್ಪಿಯಿಂದ ಮನೆಯವರಿಗೆ ಒತ್ತಡ ಆರೋಪದ ಬಗ್ಗೆ ಮಾತನಾಡಿ, ಯಾರು ಏನೇ ಹೇಳಿದರೂ ತನಿಖೆಯಿಂದ ಸತ್ಯಾಂಶ ಹೊರ ಬರುತ್ತೆ. ಪರ-ವಿರೋಧಿ ಹೇಳಿಕೆಗಳು, ಹೊಸ ಹೊಸ ತಿರುವುಗಳು ಸಹಜ. ಆದರೆ, ನಮ್ಮ ಎಸ್ಐಟಿ ಟೀಂ ಸರಿಯಾದ ಮಾರ್ಗದಲ್ಲಿ ಕೆಲಸ ಮಾಡುತ್ತಿದೆ ಎಂದರು. ಮ್ಯಾಜಿಸ್ಟ್ರೇಟ್ ಎದುರು ಅನುಮತಿ ಸಿಕ್ಕಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಜಾರಕಿಹೊಳಿಯವರ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ ಎಲ್ಲವೂ ಕಾನೂನು ಪ್ರಕಾರ ನಡೆಯುತ್ತದೆ ಎಂದು ಗೃಹ ಸಚಿವರು ಹೇಳಿದರು.