ಮೈನವಿರೇಳಿಸಿದ ಕಾರ್ ರೇಸ್.. ಗ್ರಾವೆಲ್ ಫೆಸ್ಟ್‌ನಲ್ಲಿ ಶರವೇಗದ ರೋಮಾಂಚನ! - Car race
🎬 Watch Now: Feature Video
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಏರ್ಪಡಿಸಿರುವ ಗ್ರಾವೆಲ್ ಫೆಸ್ಟ್ ಕಾರ್ಯಕ್ರಮದಲ್ಲಿ ಕಾರುಗಳ ರೋಮಾಂಚನಕಾರಿ ರೇಸ್ ನೋಡುಗರ ಮೈನವಿರೇಳಿಸಿತು. ಲಲಿತ ಮಹಲ್ ಮೈದಾನದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸದ ಉಪಸಮಿತಿ ಹಾಗೂ ಆಟೋಮೆಟಿಕ್ ಸ್ಪೋರ್ಟ್ಸ್ ಕ್ಲಬ್ ಮೈಸೂರು ವತಿಯಿಂದ ಮೈಸೂರನ್ನು ಸಾಹಸ ಪ್ರವಾಸೋದ್ಯಮ ತಾಣವಾಗಿ ಹಾಗೂ ಮೋಟಾರ್ ಕ್ರೀಡೆಯ ತಾಣವಾಗಿ ಅಭಿವೃದ್ಧಿ ಪಡಿಸಲು ಗ್ರಾವೆಲ್ ಫೆಸ್ಟ್ ಆಯೋಜನೆ ಮಾಡಲಾಗಿತ್ತು. ದೇಶದ 100 ಬೆಸ್ಟ್ ಡ್ರೈವರ್‌ಗಳು ಭಾಗಿಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಅಲ್ಲದೆ ದೆಹಲಿ, ಮಹಾರಾಷ್ಟ್ರ, ಕೇರಳ, ತೆಲಂಗಾಣ,ಗೋವಾ,ತಮಿಳುನಾಡು,ಆಂಧ್ರ ರಾಜ್ಯಗಳಿಂದ ಆಗಮಿಸಿದ ಡ್ರೈವರ್‌ಗಳು ತಮ್ಮ ಕೈಚಳಕ ತೋರಿದರು.