ದುಷ್ಟ ಶಿಕ್ಷಕ ಶಿಷ್ಟ ರಕ್ಷಕ 'ಬಬಲಾದಿ ಚಂದ್ರಯ್ಯ': ಅವತಾರಿ ಪುರುಷನ 'ಪವಾಡ ಮಠ'ದ ಮಹಿಮೆ ಅಪಾರ - ಪವಾಡ ಮಠ
🎬 Watch Now: Feature Video
ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯಿದ್ದರೆ ಸುಖಮಯ ಜೀವನ ನಡೆಸಲು ಸಾಧ್ಯ. ಎಲ್ಲರೂ ಇದನ್ನೇ ಬಯಸುತ್ತಾರೆ ಕೂಡಾ. ಇದನ್ನು ಪಡೆಯುವ ಸಲುವಾಗಿ ಬಹುತೇಕ ಮಂದಿ ದೇವರ ಮೊರೆ ಹೋಗ್ತಾರೆ. ಇಂತಹ ಅನೇಕ ಪವಿತ್ರ ಸ್ಥಳಗಳು ನಮ್ಮ ರಾಜ್ಯದಲ್ಲಿವೆ. ಇವುಗಳ ಪೈಕಿ ಬೆಳಗಾವಿ ಜಿಲ್ಲೆಯ ಘಟನಟ್ಟಿ ಗ್ರಾಮವೂ ಒಂದು. ಕೃಷ್ಣಾ ನದಿ ತೀರದ ಹಚ್ಚ ಹಸಿರಿನ ಸುಂದರ ಪರಿಸರದಲ್ಲಿರುವ ಇದೇ ಗ್ರಾಮದಲ್ಲಿ ದೈವೀ ಪುರುಷ ಚಂದ್ರಯ್ಯ ಸ್ವಾಮೀಜಿ ನೆಲೆಯಾಗಿದ್ದಾರೆ. ಅವತಾರಿ ಪುರುಷ ಚಂದ್ರಯ್ಯನವರು ಸಂಕಷ್ಟಗಳನ್ನು ಪರಿಹರಿಸಿ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾರೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.