ವಿದ್ಯಾರ್ಥಿ ವೀಸಾ ವಿಚಾರ ಟ್ರಂಪ್‌ರ ಜನಾಂಗೀಯ ವಲಸೆ ನೀತಿಯನ್ನೇ ಬದಲಿಸುತ್ತದೆ: ತಜ್ಞರ ಅಭಿಮತ - ಎಫ್-1 ವಲಸೆ ರಹಿತ ವಿದ್ಯಾರ್ಥಿ
🎬 Watch Now: Feature Video
ನವದೆಹಲಿ: ಅಮೆರಿಕದಲ್ಲಿ ನೆಲೆಸಿರುವ ವಿದೇಶಗಳ ವಿದ್ಯಾರ್ಥಿಗಳು ಕೋರ್ಸ್ಗಳ ಕಲಿಕೆಗೆ ಖುದ್ದಾಗಿ ತರಗತಿಗೆ ಹೋಗಬೇಕು. ಆನ್ಲೈನ್ನಲ್ಲಿ ಕೋರ್ಸ್ ತೆಗೆದುಕೊಳ್ಳುವವರು ದೇಶ ಬಿಟ್ಟು ಹೋಗಬೇಕು ಎಂದು ವಲಸೆ ಮತ್ತು ಸುಂಕ ನಿರ್ದೇಶನಾಲಯ ತಿಳಿಸಿದೆ. ಈ ವೀಸಾ ನೀತಿಯ ಬಗ್ಗೆ ಸ್ಟೋನಿ ಬ್ರೂಕ್ ಸ್ಕೂಲ್ ಆಫ್ ಜರ್ನಲಿಸಂನ ಡಿಜಿಟಲ್ ಇನ್ನೋವೇಷನ್ ಸಂದರ್ಶಕ ಪ್ರಾಧ್ಯಾಪಕ ಶ್ರೀನಿವಾಸನ್ ಅವರು ಈಟಿವಿ ಭಾರತಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರ ಜೊತೆ ವಿದ್ಯಾರ್ಥಿ ವೀಸಾ ಅವ್ಯವಸ್ಥೆಯ ಹಿಂದಿನ ಉದ್ದೇಶ ಮತ್ತು ಡೊನಾಲ್ಡ್ ಟ್ರಂಪ್ ಅವರ ನಾಯಕತ್ವದಲ್ಲಿ ಅಳವಡಿಸಲಾಗಿರುವ ಜನಾಂಗೀಯ ವಲಸೆ ನೀತಿಗಳ ಬಗ್ಗೆ ಅವರು ಮಾತನಾಡಿದರು.