ಕೊರಾನಾ ಭೀತಿಗೆ ಕೆಲವೇ ಗಂಟೆಯಲ್ಲಿ ಭಾರತೀಯರ 5 ಲಕ್ಷ ಕೋಟಿ ರೂ. ಸಂಪತ್ತು ಮಂಗಮಾಯ..! - ನಿಫ್ಟಿ
🎬 Watch Now: Feature Video
ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಕುಸಿದಿದೆ. ಇದರ ಪರಿಣಾಮ ಸೋಮವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 2,326.36 ಅಂಶಗಳು ಇಳಿಕೆಯಾಗಿದೆ. ಸೌದಿ ಅರೇಬಿಯಾ, ರಷ್ಯಾಗೆ ಪೈಪೋಟಿ ನೀಡಲು ದರ ಸಮರ ನಡೆಸಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 30ರಷ್ಟು ಇಳಿಕೆಯಾಗಿ ಬ್ಯಾರೆಲ್‌ಗೆ 32.11 ಡಾಲರ್ ತಲುಪಿದೆ. ಷೇರುಪೇಟೆ ವಹಿವಾಟು ಆರಂಭದಿಂದ ಇಳಿಕೆಯಾದ ಸೆನ್ಸೆಕ್ಸ್ ಶೇ 6ರಷ್ಟು ಕುಸಿದು 35,250.26 ಅಂಶಗಳಿಗೆ ಧುಮುಕಿತು. ನಿಫ್ಟಿ ಶೇ 5.78ರಷ್ಟು ಕಡಿಮೆಯಾಗಿ 15 ತಿಂಗಳ ಕನಿಷ್ಠ, 10,359.75 ಅಂಶಗಳಿಗೆ ತಲುಪಿದೆ. ಹೀಗಾಗಿ, ಹೂಡಿಕೆದಾರರ ಸುಮಾರು 5 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.