ಮಾರುಕಟ್ಟೆ ರೌಂಡಪ್: ಅಮೆರಿಕ ಆರ್ಥಿಕತೆಯ ಅನಿಶ್ಚಿತತೆ ಸುಳಿವಿನ ಬಲೆಗೆ ಸಿಲುಕಿದ ಮುಂಬೈ ಪೇಟೆ ಹೂಡಿಕೆದಾರ
ಮುಂಬೈ: ಅಮೆರಿಕ ಫೆಡ್ ಆರ್ಥಿಕ ಚೇತರಿಕೆಯ ಸುತ್ತಲೂ ಅನಿಶ್ಚಿತತೆ ಆವರಿಸಿದೆ ಎಂದುದನ್ನು ಹೊರಗೆಡವುತ್ತಿದ್ದಂತೆ ಮುಂಬೈ ಷೇರುಪೇಟೆಯಲ್ಲಿ ಕುಸಿತ ಸಂಭವಿಸಿದೆ. ಪೇಟೆ ಸೂಚ್ಯಂಕದ ಹೆವಿವೇಯ್ಟ್ಸ್ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್ಡಿಎಫ್ಸಿ ಟ್ವಿನ್ಸ್ ಜಾಗತಿಕ ಮಾರುಕಟ್ಟೆಗಳಿಂದ ನಕಾರಾತ್ಮಕದತ್ತ ಸಾಗಿದವು. ಇದರ ತತ್ಪರಿಣಾಮವಾಗಿ ಮುಂಬೈ ಷೇರು ಸೂಚ್ಯಂಕ ದಿನದ ವಹಿವಾಟಿನ ಅಂತ್ಯಕ್ಕೆ 323 ಅಂಕ ಕುಸಿದು 38,979.85 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 88.45 ಅಂಕ ಇಳಿಕೆಯಾಗಿ 11,516.10 ಅಂಕಗಳ ಮಟ್ಟಕ್ಕೆ ತಲುಪಿತು.