ಮಾರುಕಟ್ಟೆ ರೌಂಡಪ್: ದಾಖಲೆಯ 52,960 ರೂ. ತಲುಪಿದ ಚಿನ್ನ!
🎬 Watch Now: Feature Video
ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಂದು 194 ಅಂಕ ಕುಸಿದು 37,935 ಅಂಕಗಳ ಮಟ್ಟಕ್ಕೆ ತಲುಪಿದೆ. ಬ್ಯಾಂಕಿಂಗ್ ವಲಯದ ಷೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಒಳಗಾದವು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 62.35 ಅಂಕ ಇಳಿಕೆಯಾಗಿ 11,131.80 ಅಂಕಗಳಿಗೆ ತಲುಪಿತು. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆಗಳು ಹೊಸ ಗರಿಷ್ಠ ಮಟ್ಟ ತಲುಪಿ, 10 ಗ್ರಾಂ ಮೇಲೆ 905 ರೂ. ಏರಿಕೆ ಕಂಡು 52,960 ರೂ.ಯಷ್ಟಾಗಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆ.ಜಿ. ಬೆಳ್ಳಿಯು 62,323 ರೂ.ಯಿಂದ 3,347 ರೂ. ಏರಿಕೆಯಾಗಿ 65,670 ರೂ.ಯಷ್ಟಾಗಿದೆ.