ಮಾರುಕಟ್ಟೆ ರೌಂಡಪ್: ಬ್ಯಾಂಕಿಂಗ್ ಷೇರು ನಷ್ಟಕ್ಕೆ 95 ಅಂಕ ಕುಸಿದ ಸೆನ್ಸೆಕ್ಸ್ - ಪೆಟ್ರೋಲ್ ಡೀಸೆಲ್
🎬 Watch Now: Feature Video
ಮುಂಬೈ: ದೇಶಿಯ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಗುರುವಾರ 95 ಅಂಕ ಕುಸಿದಿದೆ. ಬ್ಯಾಂಕಿಂಗ್ ವಿಭಾಗದ ಷೇರುಗಳಲ್ಲಿನ ನಷ್ಟವು ಪೇಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತ್ತು. ಐಟಿ ಮತ್ತು ಗ್ರಾಹಕ ಬಾಳಿಕೆ ವಿಭಾಗದ ಷೇರುಗಳಲ್ಲಿನ ಲಾಭವೂ ಪೇಟೆಯ ಕುಸಿತವನ್ನು ಸರಿದೂಗಿಸಿತು. ದಿನದ ವಹಿವಾಟಿನ ಅಂತ್ಯದ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ 95.09 ಅಂಕ ಕುಸಿದು 38,990.94 ಅಂಕಗಳ ಮಟ್ಟದಲ್ಲಿ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 7.55 ಅಂಕ ಕ್ಷೀಣಿಸಿ 11,527.45 ಅಂಕಗಳ ಮಟ್ಟದಲ್ಲಿ ಸ್ಥಗಿತವಾಯಿತು.