ಮಾರುಕಟ್ಟೆ ರೌಂಡಪ್: ಮಾರಾಟದ ಒತ್ತಡಕ್ಕೂ ಮಣಿಯದ ಗೂಳಿ! - ಪೆಟ್ರೋಲ್ ಬೆಲೆ
🎬 Watch Now: Feature Video
ಮುಂಬೈ: ಈಕ್ವಿಟಿ ಮಾನದಂಡಗಳ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರದ ವಹಿವಾಟಿನಂದು ದುರ್ಬಲ ಜಾಗತಿಕ ಸೂಚನೆಗಳ ಮಧ್ಯೆ ಅಲ್ಪ ಏರಿಕೆಯೊಂದಿಗೆ ಮುಕ್ತಾಯಗೊಂಡಿವೆ. ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ 39,326.98 ಮುಟ್ಟಿದ ಬಿಎಸ್ಇ ಸೆನ್ಸೆಕ್ಸ್ ದಿನದ ಕೊನೆಯಲ್ಲಿ ಮಾರಾಟದ ಒತ್ತಡಕ್ಕೆ ಒಳಗಾಯಿತು. ಅಂತಿಮವಾಗಿ 39.55 ಅಂಕ ಏರಿಕೆಯಾಗಿ 39,113.47 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 9.65 ಅಂಕ ಹೆಚ್ಚಳವಾಗಿ 11,559.25 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.