2020ರ ಕೇಂದ್ರ ಬಜೆಟ್: ಪಾತಳಕ್ಕೆ ಕುಸಿದ ವಾಹನೋದ್ಯಮದ ನಿರೀಕ್ಷೆ ಏನು?
🎬 Watch Now: Feature Video
ಆಟೋಮೊಬೈಲ್ ವಲಯ ಕಳೆದ ಎರಡು ದಶಕಗಳಲ್ಲೇ 2019 ವರ್ಷದಲ್ಲಿ ಅತ್ಯಂತ ಕೆಟ್ಟ ಕಾರ್ಯಕ್ಷಮತೆ ಪ್ರದರ್ಶಿಸಿದೆ. ವಾಹನೋದ್ಯಮ ಒಟ್ಟಾರೆ ಉತ್ಪಾದನಾ ವಿಭಾಗಕ್ಕೆ ಶೇಕಡಾ 50ರಷ್ಟು ಕೊಡುಗೆಯನ್ನು ನೀಡುತ್ತಿದೆ. ಈ ವಲಯದಲ್ಲಿನ ಬಿಕ್ಕಟ್ಟು ಅನೇಕ ಶೋರೂಮ್ಗಳನ್ನು ಮುಚ್ಚಿಸಿದೆ. ಲಕ್ಷಾಂತರ ಕಾರ್ಮಿಕರು ಕೆಲಸದಿಂದ ವಜಾಗೊಂಡಿದ್ದಾರೆ. ನೂರಾರು ಉತ್ಪಾದನ ಘಟಕಗಳು ಸ್ಥಗಿತಗೊಳ್ಳಲು ಕಾರಣವಾಯಿತು. ತೆರಿಗೆ ಆದಾಯ ಕುಸಿಯುತ್ತಿದೆ ಮತ್ತು ಸರ್ಕಾರದ ಹಣಕಾಸಿನ ಕೊರತೆಯ ಗುರಿ ನಿಗದಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ, ವಾಹನೋದ್ಯಮ ಮುಂಬರುವ ನಿರ್ಮಲಾ ಸೀತಾರಾಮನ್ ಬಜೆಟ್ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕುತೂಹಲದಿಂದ ಎದುರು ನೋಡುತ್ತಿದೆ.