ಹಸಿವು ತಾಳಲಾರದೆ ಪಾರಿವಾಳ ಕೊಂದು ತಿಂದ ಮಹಿಳೆ...! - ಹಸಿವು ತಾಳಲಾರದೆ ಪಾರಿವಾಳ ಕೊಂದು ತಿಂದ ಮಹಿಳೆ
🎬 Watch Now: Feature Video
ಜಾರ್ಖಂಡ್: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಹಸಿವು ತಾಳಲಾರದೆ ಪಾರಿವಾಳ ಹಿಡಿದು ಕೊಂದು ತಿಂದಿರುವ ಘಟನೆ ರಾಂಚಿಯಲ್ಲಿ ನಡೆದಿದೆ. ಮಾಹಿತಿಗಳ ಪ್ರಕಾರ ಮಹಿಳೆಯು ಜಾರ್ಖಂಡ್ನ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾದ ರಿಮ್ಸ್ನ ಮೂಳೆ ಚಿಕಿತ್ಸಾ ವಿಭಾಗದ ಬಳಿ ಕೆಲ ದಿನಗಳಿಂದಲೂ ತಂಗಿದ್ದಾರೆ. ಆದರೆ ಆಸ್ಪತ್ರೆಯ ಯಾವೊಬ್ಬ ಸಿಬ್ಬಂದಿಯೂ ಮಹಿಳೆಯನ್ನು ಗಮನಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಮಹಿಳೆ ಅಲ್ಲಿದ್ದ ಪಾರಿವಾಳವನ್ನು ಹಿಡಿದು ತಿಂದಿದ್ದು, ಘಟನೆ ಸಾರ್ವಜನಿಕ ಆಸ್ಪತ್ರೆ ಬಳಿ ನಡೆದಿದ್ದರಿಂದ ಜನರು ಕೊಂಚ ಭಯಭೀತರಾಗಿದ್ದಾರೆ. ಈ ಮಧ್ಯ ಆಸ್ಪತ್ರೆಯವರಾದರು ಆಕೆಯ ಹಸಿವು ನೀಗಿಸಬಹುದಾಗಿತ್ತು ಎಂಬ ಮಾತು ಕೂಡ ಕೇಳಿ ಬಂದಿದೆ.