ಗುಮ್ಮಟ ನಗರಿಯಲ್ಲಿ ಜನರಿಗೆ ಸಿರಿಧಾನ್ಯ ಪರಿಚಯಿಸುವ ಮೂಲಕ ಹೊಸವರ್ಷಾಚರಣೆ - Latest New Year Celebration in vijaypura
🎬 Watch Now: Feature Video
ವಿಜಯಪುರ: ನಗರದಲ್ಲಿ ಶಾಂತಿಯುತವಾಗಿ ಹೊಸ ವರ್ಷಾಚರಣೆ ನಡೆಯಿತು. ಸಿರಿ ಧಾನ್ಯ ಆಹಾರ ಮಹತ್ವ ಕುರಿತಾಗಿ ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಇಲ್ಲೊಂದೆಡೆ ವಿಶೇಷ ಕಾರ್ಯಕ್ರಮ ನಡೆಯಿತು. ಹಳ್ಳಿಮನೆ ಹೋಟೆಲ್ ಮಾಲಿಕ ಮಲ್ಲಿಕಾರ್ಜುನ ಹಟ್ಟಿ ತಮ್ಮ ಹೋಟೆಲ್ನಲ್ಲಿ ಹೊಸ ವರ್ಷದ ಅಂಗವಾಗಿ 'ಸಿರಿಧಾನ್ಯ ಸಂಕಲ್ಪ-2020' ಎಂಬ ಶೀರ್ಷಿಕೆಯ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಸಿರಿಧಾನ್ಯ ಆಹಾರದ ಆರೋಗ್ಯಯುತ ಬದುಕನ್ನು ಜನರಿಗೆ ತಿಳಿಸುವ ವಿನೂತನ ಪ್ರಯತ್ನ ನಡೆಯಿತು. ಜೊತೆಗೆ ಕೊರಲೆ,ರಾಗಿ,ಜೋಳ ಸೇರಿದಂತೆ ಇತರೆ ಸಿರಿ ಧಾನ್ಯಗಳಿಂದ ತಯಾರಿಸಿದ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡು ಸಂಭ್ರಮಿಸಿದರು.