ಮಗಳ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಲೇ ಪ್ರಾಣಬಿಟ್ಟ ಪೊಲೀಸ್ ಅಧಿಕಾರಿ... ವಿಡಿಯೋ - ಕೊಲ್ಲಂ
🎬 Watch Now: Feature Video
ಕೊಲ್ಲಂ(ಕೇರಳ): ಮಗಳ ಮದುವೆಯ ಮುನ್ನಾ ದಿನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿರುವ ವೇಳೆ ತಂದೆ ಸಾವನ್ನಪ್ಪಿದ ಮನಲಕುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿ ವಿಷ್ಣು ಪ್ರಸಾದ್ ವೃತ್ತಿಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕುಸಿದು ಬಿದ್ದ ವಿಷ್ಣು ಪ್ರಸಾದ್ರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಫಲ ನೀಡಲಿಲ್ಲ. ಎರಡು ತಿಂಗಳ ಹಿಂದಷ್ಟೇ ಸಬ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದಿದ್ದರು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.