'ಎಂಜಾಯ್ ಎಂಜಾಮಿ' ಹಾಡಿಗೆ ಡ್ಯಾನ್ಸ್ ಮಾಡಿ ಪೊಲೀಸರಿಂದ ಕೊರೊನಾ ಜಾಗೃತಿ.. ವಿಡಿಯೋ - ಕೇರಳ ಪೊಲೀಸ್ ಇಲಾಖೆ
🎬 Watch Now: Feature Video
ತಿರುವನಂತಪುರಂ(ಕೇರಳ): ಕೋವಿಡ್ ವೈರಸ್ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಉದ್ದೇಶದಿಂದ ಕೇರಳ ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಎಂಜಾಯ್ ಎಂಜಾಮಿ ಎಂಬ ತಮಿಳುನಾಡಿನ ಸೂಪರ್ಹಿಟ್ ಸಾಂಗ್ಗೆ ಡ್ಯಾನ್ಸ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಈ ಸಾಂಗ್ ಮೂಲಕ ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವಂತೆ ಕೇಳಿಕೊಂಡಿದ್ದಾರೆ. ವಿಶೇಷವೆಂದರೆ ವಿಡಿಯೋದಲ್ಲಿ ಒಂಬತ್ತು ಪೊಲೀಸರು ಡ್ಯಾನ್ಸ್ ಮಾಡಿದ್ದು, ಇದೀಗ ಕೇರಳದ ರಾಜ್ಯ ಪೊಲೀಸ್ ಇಲಾಖೆ ಈ ವಿಡಿಯೋ ಶೇರ್ ಮಾಡಿಕೊಂಡಿದೆ.