ಚೇಂಬರ್ನಲ್ಲೇ ಮಾಜಿ ಶಾಸಕರಿಗೆ ಹಿಗ್ಗಾಮುಗ್ಗ ಥಳಿತ : ವಿಡಿಯೋ ನೋಡಿ
🎬 Watch Now: Feature Video
ವಾರಣಾಸಿ : ಮಾಜಿ ಶಾಸಕರೋರ್ವರನ್ನು ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಚಿರಗಾಂವ್ ಚೌಬೆಪುರ ಜಿಲ್ಲೆಯ ಭಗತುವಾ ಅಮೌಲಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಚಿರಗಾಂವ್ ಅಸೆಂಬ್ಲಿಯಿಂದ ಎರಡು ಬಾರಿ ಶಾಸಕರಾಗಿದ್ದ ಮಾಯಾ ಶಂಕರ್ ಪಾಠಕ್ ಹಲ್ಲೆಗೊಳಗಾದವರು. ಬಲೂವಾ ಪಹಡಿಯಾ ಮಾರ್ಗ ಎಂಬ ಹಳ್ಳಿಯಲ್ಲಿ ಎಂಜಿನಿಯರಿಂಗ್ ಕಾಲೇಜು ತೆರೆದಿದ್ದು, ಇಲ್ಲಿ. ವಿದ್ಯಾರ್ಥಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿದ ಪೋಷಕರು ಕಾಲೇಜಿಗೆ ಬಂದು ಮಾಜಿ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.