ಅಡ್ಡಾದಿಡ್ಡಿ ಟ್ರ್ಯಾಕ್ಟರ್ ಓಡಿಸಿದ ಪ್ರತಿಭಟನಾಕಾರ... ಪ್ರಾಣ ಉಳಿಸಿಕೊಳ್ಳಲು ಕಂಗೆಟ್ಟು ಓಡಾಡಿದ ಪೊಲೀಸ್! - ರೈತರ ಟ್ರ್ಯಾಕ್ಟರ್ ಪರೇಡ್ ನ್ಯೂಸ್
🎬 Watch Now: Feature Video
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸಾವಿರಾರು ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಸಂಘರ್ಷ ಸಹ ನಡೆದಿದೆ. ಪೊಲೀಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾನಿರತರನ್ನ ಚದುರಿಸಲು ಮುಂದಾಗುತ್ತಿದ್ದ ವೇಳೆ ಪ್ರತಿಭಟನಾಕಾರನೋರ್ವ ಅಡ್ಡಾದಿಡ್ಡಿಯಾಗಿ ಟ್ರ್ಯಾಕ್ಟರ್ ಓಡಿಸಿದ್ದಾನೆ. ಈ ವೇಳೆ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಪೊಲೀಸರು ದಿಕ್ಕಾಪಾಲಾಗಿ ಓಡಾಡಿದ್ದಾರೆ. ರೈತರು ನಡೆಸಲು ಮುಂದಾಗಿದ್ದ ಟ್ರ್ಯಾಕ್ಟರ್ ಪರೇಡ್ಗೆ ದೆಹಲಿ ಪೊಲೀಸರು ಕೆಲವೊಂದು ನಿಯಮದಡಿ ರೂಟ್ ಮ್ಯಾಪ್ ಹಾಕಿ ಕೊಟ್ಟಿದ್ದರು. ಆದರೆ ಇದನ್ನ ಗಾಳಿಗೆ ತೂರಿ ಕೆಂಪುಕೋಟೆಗೆ ನುಗ್ಗಲು ಯತ್ನಿಸಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.