ಶಾಲೆಗೆ ಪುಸ್ತಕಗಳನ್ನು ತರುತ್ತಿದ್ದ ಟ್ರ್ಯಾಕ್ಟರ್ಗೆ ನುಗ್ಗಿದ ನೀರು! - ಶಾಲೆಗೆ ಪುಸ್ತಗಳನ್ನು ತರುತ್ತಿದ್ದ ಟ್ರ್ಯಾಕ್ಟರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8340321-127-8340321-1596870912583.jpg)
ಬೈತುಲ್ (ಮ.ಪ್ರ): ಭೀಂಪುರ ಅಭಿವೃದ್ಧಿ ವಿಭಾಗದ ಶಿಕ್ಷಣದ ಅವ್ಯವಸ್ಥೆ ಇದೀಗ ಬೆಳಕಿಗೆ ಬಂದಿದೆ. ಚುನಲೋಮಾ ಗ್ರಾಮಕ್ಕೆ ಟ್ರ್ಯಾಕ್ಟರ್ ಮೂಲಕ ಪ್ರೌಢಶಾಲೆಗೆ ಪುಸ್ತಕಗಳನ್ನು ತರುತ್ತಿದ್ದಾಗ ಪುಸ್ತಗಳೆಲ್ಲಾ ಒದ್ದೆಯಾಗಿವೆ.ತಪತಿ ನದಿಯ ಬಳಿ ಟ್ರ್ಯಾಕ್ಟರ್ ಹಾದುಹೋಗುತ್ತಿದ್ದಾಗ, ನದಿಯ ನೀರು ಒಮ್ಮಿಂದೊಮ್ಮಲೆ ಅಧಿಕವಾಗಿ ಪುಸ್ತಕಗಳೆಲ್ಲ ಒದ್ದೆಯಾಗಿವೆ. ಇದಾದ ಬಳಿಕ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಎಳೆಯಲು ಜೆಸಿಬಿ ಯಂತ್ರವನ್ನು ಬಳಸಲಾಯಿತು. ಗ್ರಾಮಸ್ಥರ ಸಹಾಯದಿಂದ ಪುಸ್ತಕಗಳನ್ನು ಮತ್ತೆ ಟ್ರ್ಯಾಲಿಯಲ್ಲಿ ಇರಿಸಿ ಚುನಲೋಮಕ್ಕೆ ಕೊಂಡೊಯ್ಯಲಾಯಿತು. ಈ ಘಟನೆಯನ್ನು ಪ್ರತ್ಯಕ್ಷ್ಯದರ್ಶಿಗಳು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.