ರಾಜನಂತೆ ಮನೆಗೆ ನುಗ್ಗಿ ಬೆಡ್ ಮೇಲೆ ಮಲಗಿದ ಬೆಂಗಾಲ್ ಟೈಗರ್... ಅತಿಥಿ ಕಂಡು ಬೆರಗಾದ ಜನ! - ನೋಡಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3877609-1011-3877609-1563455558367.jpg)
ಮನೆಯ ಬೆಡ್ ಮೇಲೆ ಹುಲಿಯೊಂದು ಮಲಗಿರುವುದನ್ನು ಕಂಡು ಮಾಲೀಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿರುವ ಘಟನೆ ಅಸ್ಸೋಂನ ಕಾಜಿರಂಗ್ನಲ್ಲಿ ನಡೆದಿದೆ. ಅಸ್ಸೋಂನ ಕಾಜಿರಂಗ ನ್ಯಾಷನಲ್ ಪಾರ್ಕ್ ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಘೇಂಡಾಮೃಗಗಳನ್ನು ಹೊಂದಿದೆ. ಇಲ್ಲಿ ಇನ್ನಿತರ ಜೀವಿಗಳಾದ ಹುಲಿ ಮತ್ತು ಆನೆಗಳನ್ನು ಕಾಣಬಹುದಾಗಿದೆ. ಪ್ರಾಣಿ ಬೇಟೆಯನ್ನು ತಪ್ಪಿಸುವ ಉದ್ದೇಶದಿಂದ ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ನ್ಯಾಷನಲ್ ಹೈ ವೇ 37ರಲ್ಲಿ ಜಾಗೃತರಾಗಿದ್ದಾರೆ. ಈ ಹೈವೇ ಬಳಿಯ ಮನೆಯೊಂದರಲ್ಲಿ ಹುಲಿಯೊಂದು ನುಗ್ಗಿದೆ. ಆ ಮನೆಯ ಬೆಡ್ ಮೇಲೆ ರಾಯಲ್ ಬೆಂಗಾಲ್ ಟೈಗರ್ ಸಖತ್ ನಿದ್ದೆ ಮಾಡುತ್ತಿತ್ತು. ಮನೆಯ ಕಿಂಡಿಯೊಂದರಿಂದ ಹುಲಿ ಮಲಗಿರುವುದನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Last Updated : Jul 18, 2019, 7:05 PM IST