ಸುಜಾತಾ ಗೋಗಿನೇನಿಗೆ ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರ ಭೂಷಣ್ ಪ್ರಶಸ್ತಿ... - ಶಸ್ತ್ರಾಸ್ತ್ರ ಭೂಷಣ್ ಪ್ರಶಸ್ತಿ
🎬 Watch Now: Feature Video
ಹೈದರಾಬಾದ್: ರಕ್ಷಣಾ ಇಲಾಖೆಯಿಂದ ಕೊಡಮಾಡುವ ಪ್ರತಿಷ್ಠಿತ ಶಸ್ತ್ರಾಸ್ತ್ರ ಭೂಷಣ್ ಪ್ರಶಸ್ತಿಯನ್ನು ಸಂಗಾರೆಡ್ಡಿ ಜಿಲ್ಲೆಯ ಆರ್ಡ್‌ನೆನ್ಸ್ ಕಂಪನಿಯ ಹೆಚ್ಚುವರಿ ಜನರಲ್ ಮ್ಯಾನೇಜರ್ ಸುಜಾತಾ ಗೋಗಿನೇನಿ ಅವರಿಗೆ ನೀಡಲಾಗಿದೆ. 2019ರ ಮಹಿಳಾ ದಿನಾಚರಣೆಯ ಪ್ರಶಸ್ತಿಗೆ ಸುಜಾತಾ ಆಯ್ಕೆಯಾಗಿದ್ದಾರೆ ಎಂದು ಕಂಪನಿ ಡಿಜಿ ಗಗನ್ ಚತುರ್ವೇದಿ ಸೋಮವಾರ ತಿಳಿಸಿದ್ದಾರೆ. ಸುಜಾತ ಅವರು ಕಾರ್ಮಿಕ ನಾಯಕ ಗೋಗಿನೇನಿ ಸೂರ್ಯಂ, ಸುಶೀಲ ದಂಪತಿ ಪುತ್ರಿ. ಈ ತಿಂಗಳ 18ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.