ಕಲಾವಿದ ಸುದರ್ಶನ್ ಪಟ್ನಾಯಕ್ ಕೈಚಳಕ: ಮರಳು ಶಿಲ್ಪದ ಮೂಲಕ ಏಡ್ಸ್ ಜನಜಾಗೃತಿ - aids awareness through sand sculpture
🎬 Watch Now: Feature Video
ಪುರಿ(ಒಡಿಶಾ): ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಏಡ್ಸ್ ರೋಗದ ಅಪಾಯ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಏಡ್ಸ್ ದಿನ ಆಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ, 'ಪದ್ಮಶ್ರೀ' ಸುದರ್ಶನ್ ಪಟ್ನಾಯಕ್ ಅವರು ಮಂಗಳವಾರ ಪುರಿಯ ಗೋಲ್ಡನ್ ಬೀಚ್‌ನಲ್ಲಿ ಸುಂದರವಾದ ಮರಳು ಕಲಾಕೃತಿ ಮತ್ತು ಕೆಂಪು ರಿಬ್ಬನ್ ಬಿಡಿಸಿ ಏಡ್ಸ್ ಜಾಗೃತಿ ಸಂದೇಶ ರವಾನಿಸಿದರು.