ಟ್ಯಾಂಕರ್ ಆಗಮಿಸುತ್ತಿದ್ದಂತೆ ನೀರಿಗಾಗಿ ಸರ ಸರನೆ ಏರಿ ಬಿಡ್ತಾರೆ ಹೆಣ್ಮಕ್ಳು... ವಿಡಿಯೋ - ದೆಹಲಿ ವೈರಲ್ ವಿಡಿಯೋ
🎬 Watch Now: Feature Video
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಎಂಬುವುದಕ್ಕೆ ಸಾಕ್ಷಿ ಹೇಳುವ ವಿಡಿಯೋ ಒಂದು ಲಭ್ಯವಾಗಿದೆ. ನಗರದ ಚಾಣಕ್ಯಪುರಿ ಪ್ರದೇಶದ ವಿವೇಕಾನಂದ ಕ್ಯಾಂಪ್ನದ್ದು ಎನ್ನಲಾದ ಈ ವಿಡಿಯೋದಲ್ಲಿ, ದೆಹಲಿ ಮಹಾನಗರ ಪಾಲಿಕೆಯ ನೀರಿನ ಟ್ಯಾಂಕರ್ ತಮ್ಮ ಏರಿಯಾಗೆ ಆಗಮಿಸುತ್ತಿದ್ದಂತೆ ಕೆಲ ಹೆಣ್ಣು ಮಕ್ಕಳು ಸರ ಸರನೆ ಟ್ಯಾಂಕರ್ ಮೇಲೆ ಏರಿ ಬಿಡುತ್ತಾರೆ. ಇನ್ನುಳಿದವರು ನೀರು ತುಂಬಿಸಿಕೊಳ್ಳಲು ಕೆಳಗಡೆಯಿಂದ ಪೈಪ್ಗಳನ್ನು ಕೊಡುತ್ತಾರೆ. ಟ್ಯಾಂಕ್ ಮೇಲಿರುವ ಹೆಣ್ಣು ಮಕ್ಕಳು ಪಟ ಪಟ ಅಂತ ಪೈಪ್ಗಳನ್ನು ಅಳವಡಿಸುತ್ತಾರೆ. ಜನ ಮುಗಿಬಿದ್ದು ಸಿಕ್ಕಿದ ಬಕೆಟ್, ಪಾತ್ರೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಟ್ಯಾಂಕರ್ ಏರುವ ವೇಗ ನೋಡಿದ್ರೆ ಈ ಪ್ರದೇಶದಲ್ಲಿ ಪ್ರತಿನಿತ್ಯದ ಪರಿಸ್ಥಿತಿ ಇದೇ ಆಗಿದೆ ಎಂಬಂತೆ ಕಾಣುತ್ತೆ. ಹೀಗಾಗಿ ಅವರಿಗೆ ಟ್ಯಾಂಕರ್ ಏರುವುದು ಅಭ್ಯಾಸವಾಗಿಬಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.