ಹಿಮದ ಹೊದಿಕೆಯಲ್ಲಿ ಮಿಂದೆದ್ದ ಕಾಶ್ಮೀರ : ವಿಡಿಯೋ - Kashmir received the first snowfall
🎬 Watch Now: Feature Video

ಕಾಶ್ಮೀರ/ಶ್ರೀನಗರ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಶೀತಗಾಳಿ ಮುಂದುವರೆದಿದೆ. ಬಹುತೇಕ ತಾಣಗಳು ಭಾರೀ ಹಿಮದ ಹೊದಿಕೆಯಲ್ಲಿ ಮಿಂದೆದ್ದಿವೆ. ಇಂದೂ ಕೂಡ ಒಂದೇ ಸಮನೆ ಹಿಮ ಸುರಿಯುತ್ತಿದ್ದು, ಶ್ರೀನಗರದಲ್ಲಿ ಸುಮಾರು 2-3 ಇಂಚುಗಳಷ್ಟು ಹಿಮ ಬಿದ್ದಿದೆ. ಮುಂದಿನ 24 ಗಂಟೆಗಳ ಕಾಲ ಹವಾಮಾನ ಹೀಗೆ ಇರುತ್ತದೆ. ಪ್ರತಿ ಜಿಲ್ಲೆಯಲ್ಲಿ ಹಿಮ ತೆರವುಗೊಳಿಸುವ ಯಂತ್ರವನ್ನು ಇರಿಸಿದ್ದೇವೆ ಮತ್ತು ಜಿಲ್ಲಾಧಿಕಾರಿಗಳು ಪರಿಸ್ಥಿತಿ ಕುರಿತು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹವಾಮಾನ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಜೊತೆಗೆ ಮಧ್ಯ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಭಾರೀ ಹಿಮ ಬೀಳುತ್ತಿದ್ದು, ಕುಲ್ಗಂ ಜಿಲ್ಲೆಯಲ್ಲಿ ಮೂರು ಅಡಿ ಹಿಮ ದಾಖಲಾಗಿದ್ದರೆ, ಶ್ರೀನಗರ ಮತ್ತು ಬುಡ್ಗಂನಲ್ಲಿ ಈವರೆಗೆ ಮೂರರಿಂದ ಐದು ಇಂಚು ಹಿಮ ಬಿದ್ದಿದೆ.