ನಿದ್ರೆಯಲ್ಲಿದ್ದ ಮಹಿಳೆಗೆ ಬೆಂಕಿಯಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.. ಸಿಸಿಟಿವಿಯಲ್ಲಿ ಭೀಕರ ದೃಶ್ಯಾವಳಿ! - ತಮಿಳುನಾಡಿನ ಕ್ರೈಂ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11355479-thumbnail-3x2-wdfdfdfdf.jpg)
ಚೆನ್ನೈ(ತಮಿಳುನಾಡು): ಗಾಢವಾದ ನಿದ್ರೆಯಲ್ಲಿದ್ದ ಮಹಿಳೆಯೊಬ್ಬಳಿಗೆ ಬೆಂಕಿ ಹಚ್ಚಿರುವ ವ್ಯಕ್ತಿ ತಂದನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನ ಕೊಯಾಂಬೆಡು ಬಸ್ ಟರ್ಮಿನಲ್ನಲ್ಲಿ ನಡೆದಿದೆ. ಕೂಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ ಮುತ್ತು(48) ಹಾಗೂ ಶಾಂತಿ(46) ಸಾವನ್ನಪ್ಪಿರುವ ದುರ್ದೈವಿಗಳು. ಇಬ್ಬರು ಬಸ್ ಟರ್ಮಿನಲ್ನ ಪಾದಚಾರಿ ಪಕ್ಕದಲ್ಲಿ ವಾಸವಾಗಿದ್ದರು. ಶಾಂತಿ ಮತ್ತೊಬ್ಬ ವ್ಯಕ್ತಿ ಜತೆ ಸಂಬಂಧ ಹೊಂದಿದ್ದಳು. ಜತೆಗೆ ತನ್ನೊಂದಿಗೆ ಸಂಬಂಧ ಕಳೆದುಕೊಳ್ಳುವಂತೆ ಮುತ್ತುಗೆ ಹೇಳಿದ್ದಳು. ಇದರಿಂದ ಕೋಪಗೊಂಡ ಆತ ರಾತ್ರಿ ವೇಳೆ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತದನಂತರ ಆತನು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.