ಶಬರಿಗಿರಿಯಲ್ಲಿ ಮಕರ ಜ್ಯೋತಿ ಕಣ್ತುಂಬಿಕೊಂಡ ಭಕ್ತರು... 'ಸ್ವಾಮಿಯೇ ಶರಣಂ ಅಯ್ಯಪ್ಪ' ಜಯಘೋಷ! - ಶಬರಿಗಿರಿಯಲ್ಲಿ ಮಕರ ಜ್ಯೋತಿ
🎬 Watch Now: Feature Video
ಶಬರಿಮಲೈ(ಕೇರಳ): ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತರು ಶ್ರದ್ಧಾಭಕ್ತಿಗಳೊಂದಿಗೆ ಕಾತುರದಿಂದ ನಿರೀಕ್ಷಿಸುತ್ತಿದ್ದ ಮಕರಜ್ಯೋತಿ ಪುಣ್ಯ ದರ್ಶನ ಕೊನೆಗೂ ಪಡೆದುಕೊಂಡಿದ್ದಾರೆ. ಲಕ್ಷಾಂತರ ಅಯ್ಯಪ್ಪನ ಮಾಲಾಧಾರಿಗಳು ದಿವ್ಯ ಸನ್ನಿಧಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ. ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಸಂಜೆ 6.45ರ ಸುಮಾರಿಗೆ ಕಾಣಿಸಿಕೊಂಡಿತು. ಇದನ್ನು ನೋಡುತ್ತಿದ್ದಂತೆ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಜಯಘೋಷ ಕೂಗಿದರು.