ರಸ್ತೆಯೂ ಇಲ್ಲ..ಆಸ್ಪತ್ರೆಯೂ ಇಲ್ಲ..ಗರ್ಭಿಣಿಯನ್ನು 4 ಕಿ.ಮೀ ಹೊತ್ತು ಸಾಗಿದ ಕುಟುಂಬ - Primary health center shortage
🎬 Watch Now: Feature Video
ಒಡಿಶಾ: ಇಲ್ಲಿನ ಕೋಯನ್ಜಾರ್ ಜಿಲ್ಲೆಯ ತಮಂಗ್ ಗ್ರಾಮದಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಗರ್ಭಿಣಿಯನ್ನು 4 ಕಿಲೋ ಮೀಟರ್ ದೂರದವರೆಗೂ ಹೊತ್ತೊಯ್ದಿದ್ದಾರೆ. ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಆ್ಯಂಬುಲೆನ್ಸ್ವರೆಗೆ ತಲುಪಲು 4 ಕಿಲೋ ಮೀಟರ್ನಷ್ಟು ದುರ್ಗಮ ಹಾದಿಯಲ್ಲಿ ಇಬ್ಬರು ದೊಡ್ಡ ಪಾತ್ರೆಯಿಂದ ಮಾಡಿರುವ ಜೋಳಿಗೆಯಲ್ಲಿ ಮಹಿಳೆಯನ್ನು ಹೊತ್ತು ಸಾಗಿದ್ದಾರೆ. ಈ ಗ್ರಾಮದಲ್ಲಿ ರಸ್ತೆ ಸಂಪರ್ಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರತೆಯಿದ್ದು, ಅನಾರೋಗ್ಯದಂತಹ ಸಂದರ್ಭದಲ್ಲಿ ದೂರದೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ.