ವಿಶ್ವನಾಥ ಕಾರಿಡಾರ್ ಯೋಜನೆಗೆ ಅಸ್ತು; ಕಾಶಿಯಲ್ಲಿ ಕ್ಷೀರಾಭಿಷೇಕ ನೆರವೇರಿಸಿದ ಪ್ರಧಾನಿ ಮೋದಿ - ಕ್ಷೀರಾಭಿಷೇಕ ಮಾಡಿ ಪೂಜೆ ಮಾಡಿದ ಮೋದಿ
🎬 Watch Now: Feature Video
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಡಿ. 13) ಕಾಶಿಗೆ ಭೇಟಿ ನೀಡಿದ್ದು, ವಿಶ್ವನಾಥ ಮಂದಿರ ಮತ್ತು ಗಂಗಾ ನದಿಗೆ ಸಂಪರ್ಕ ಕಲ್ಪಿಸುವ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಉದ್ಘಾಟಿಸಿದರು. ಅದಕ್ಕೂ ಮುನ್ನ ಗಂಗಾನದಿಯಲ್ಲಿ ಮೂರು ಬಾರಿ ಮುಳಿಗೆದ್ದು, ಕಾಶಿ ವಿಶ್ವನಾಥನಿಗೆ ಕ್ಷೀರಾಭಿಷೇಕ ಮಾಡಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ನೋಡಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಪ್ರಧಾನಿಗೆ ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಅವರ ಕಡೆ ಕೈಬೀಸುತ್ತಾ ಪ್ರಧಾನಿ ಮೋದಿ ಮುಗುಳ್ನಗುತ್ತಾ ಧನ್ಯವಾದ ಹೇಳಿದರು.