ಅಬ್ಬಾ!! ಅದೆಂಥಾ ಸಿಟ್ಟು.. ಸತ್ರೂ ಚಾಕು ಚುಚ್ಚೊದನ್ನಾ ನಿಲ್ಲಿಸಲಿಲ್ಲ ಕೊಲೆಗಾರ!
🎬 Watch Now: Feature Video
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಕೊಲೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಯ ಮೂಡಿಸುತ್ತಿದೆ. ಇಲ್ಲಿನ ಗಾಂಧಿ ಪಾರ್ಕ್ ಬಳಿ ಬೆಳ್ಳಂಬೆಳಗ್ಗೆ ಯುವಕ ಥಾಮಸ್ ಜೋಸೆಫ್ ಎಂಬ ವ್ಯಕ್ತಿ ದಾರುಣವಾಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಅದೆಂಥಾ ಸಿಟ್ಟು ಅಂದ್ರೆ ಯುವಕ ಥಾಮಸ್ ಸಾವನ್ನಪ್ಪಿದ್ರೂ ಸಹ ಜೋಸೆಫ್ ಚಾಕು ದಾಳಿ ಮುಂದುವರಿಸಿದ್ದು, ವಿಡಿಯೋದಲ್ಲಿ ಕಾಣಬಹುದಾಗಿದೆ. ಥಾಮಸ್ ಮತ್ತು ಜೋಸೆಫ್ ಪತ್ನಿ ಒಂದೇ ಶಾಪಿಂಗ್ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಥಾಮಸ್ ಮತ್ತು ಜೋಸೆಫ್ ಮಧ್ಯೆ ಯಾವುದೋ ವಿಷಯಕ್ಕೆ ಮನಸ್ತಾಪವಾಗಿದೆ. ಮಾತನಾಡಲು ಕರೆಸಿಕೊಂಡಿದ್ದ ಜೋಸೆಫ್ ನಡು ರಸ್ತೆಯಲ್ಲಿ ಎಲ್ಲರೂ ನೋಡು ನೋಡುತ್ತಿದ್ದಂತೆ ಯುವಕ ಥಾಮಸ್ ಮೇಲೆ ಮನಸೋಚ್ಛೆ ಚಾಕು ದಾಳಿ ನಡೆಸಿದ್ದಾನೆ. ಈ ವೇಳೆ ಜೋಸೆಫ್ ಪತ್ನಿ ಮತ್ತು ರಸ್ತೆ ಮೇಲೆ ಸವಾರರು ಜೋಸೆಫ್ನ್ನು ತಡೆದ್ರೂ ಪ್ರಯೋಜನವಾಗಲಿಲ್ಲ. ಬಳಿಕ ಜೋಸೆಫ್ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಇನ್ನು ಈ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.