ಮಂಗಳನ ಮೇಲೆ ರೋವರ್ ಲ್ಯಾಂಡಿಂಗ್ - ನಾಸಾದಿಂದ ವಿಡಿಯೋ ರಿಲೀಸ್ - ಮಂಗಳ ಗ್ರಹ
🎬 Watch Now: Feature Video
ಕ್ಯಾಲಿಫೋರ್ನಿಯಾ (ಅಮೆರಿಕ): ಮಂಗಳ ಗ್ರಹದ ಮೇಲೆ ರೋವರ್ ಇಳಿಯುವ ಮೊದಲ ಉತ್ತಮ ಗುಣಮಟ್ಟದ ವಿಡಿಯೋವನ್ನು ನಾಸಾ ಬಿಡುಗಡೆ ಮಾಡಿದೆ. ರಾಕೆಟ್ ಇಂಜಿನ್ಗಳು ರೋವರ್ ಅನ್ನು ಮಂಗಳನ ಅಂಗಳದಲ್ಲಿ ಇಳಿಸುತ್ತಿದ್ದಂತೆಯೇ ಗ್ರಹದ ಮೇಲ್ಮೈನಿಂದ ಕೆಂಪು ಧೂಳು ಮೇಲೇಳುತ್ತಿರುವ ದೃಶ್ಯ ಮೈನವಿರೇಳಿಸುವಂತಿದೆ. ನಾಸಾ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾದ ಪರ್ಸೆವೆರೆನ್ಸ್ ಹೆಸರಿನ ರೊಬಾಟಿಕ್ ರೋವರ್ ಅನ್ನು ಫೆ.18ರಂದು ಯಶಸ್ವಿಯಾಗಿ ನಾಸಾ ಇಳಿಸಿತ್ತು. ಲ್ಯಾಂಡ್ ಆದ ಬಳಿಕ ಅನೇಕ ಕಪ್ಪು-ಬಿಳುಪು ಹಾಗೂ ವರ್ಣರಂಜಿತ ಫೋಟೋಗಳನ್ನು ರೋವರ್ ಕಳುಹಿಸುತ್ತಿದೆ.