ಪರಸ್ಪರ ಬೆಂಕಿ ಉಂಡೆ ಎಸೆತ... ಸಾಂಪ್ರದಾಯಿಕ ಆಟದಲ್ಲಿ 20 ಜನರಿಗೆ ಗಾಯ! - ಇಂದೋರ್ ಹಿಂಗೋಟ್ ಯುದ್ಧದಲ್ಲಿ 20 ಜನರಿಗೆ ಗಾಯ
🎬 Watch Now: Feature Video
ಮಧ್ಯಪ್ರದೇಶದ ಇಂದೋರ್ನಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಗೌತಮಪುರದಲ್ಲಿ ಬೆಂಕಿ ಉಂಡೆ ಎಸೆಯುವ ಆಟ ನಡೆಯುತ್ತದೆ. ಇದಕ್ಕೆ ಹಿಂಗೋಟ್ ಯುದ್ಧ ಎಂದು ಕರೆಯುತ್ತಾರೆ. ಹಿಂಗೋಟ್ ಎಂಬ ಹಣ್ಣಿನಲ್ಲಿ ಪಟಾಕಿಯ ಮದ್ದನ್ನು ತುಂಬಿ ಅದಕ್ಕೆ ಬೆಂಕಿ ಹಚ್ಚಿ ಎರಡು ತಂಡಗಳು ಪರಸ್ಪರ ಎಸೆಯುತ್ತವೆ. ಈ ಆಟವನ್ನು ದೀಪಾವಳಿ ಹಬ್ಬದ ಮರುದಿನ ಆಡುವ ಸಂಪ್ರದಾಯ ರೂಢಿಯಲ್ಲಿದೆ. ಈ ಆಟದಿಂದಾಗಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.