ಪುರಿ ಜಗನ್ನಾಥ ದೇವಾಲಯದ ಬ್ಯಾರಿಕೇಡ್ನಲ್ಲಿ ಸಿಲುಕಿದ ಬಾಲಕಿ ತಲೆ: ಮುಂದೇನಾಯ್ತು? - ಪುರಿ ಜಗನ್ನಾಥ ದೇವಾಲಯ ಸುದ್ದಿ
🎬 Watch Now: Feature Video
ಪುರಿ: ಒಡಿಶಾದ ಪುರಿ ಜಗನ್ನಾಥ ದೇವಾಲಯದ ಮುಂದೆ ಹಾಕಿದ ಕಬ್ಬಿಣದ ಬ್ಯಾರಿಕೇಡ್‌ನ ಗ್ರಿಲ್‌ನಲ್ಲಿ ನಾಲ್ಕು ವರ್ಷದ ಬಾಲಕಿಯ ತಲೆ ಆಕಸ್ಮಿಕವಾಗಿ ಸಿಲುಕಿಕೊಂಡಿತ್ತು. ಗ್ರಿಲ್ನ ಅನ್ನು ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಕಟರ್ನಿಂದ ತುಂಡರಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಘಟನೆಯಿಂದ ದೇವಾಲಯದ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸದ್ಯ ವಾತಾವರಣ ತಿಳಿಯಾಗಿದೆ ಎಂದು ತಿಳಿದುಬಂದಿದೆ.