ಪ್ರಶಂಸೆ ಸಾಕು; ನಮಗೆ ಸೂಕ್ತ ವೇತನ ಬೇಕು: ಏಮ್ಸ್ ನರ್ಸ್‌ಗಳಿಂದ ಮುಷ್ಕರ
🎬 Watch Now: Feature Video
ನವದೆಹಲಿ: 6ನೇ ವೇತನ ಆಯೋಗದಡಿಯಲ್ಲಿ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಪೂರೈಕೆಗೆ ಆಗ್ರಹಿಸಿ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನ ಸುಮಾರು 5,000 ನರ್ಸ್ಗಳು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ಇವರ ಬಹುತೇಕ ಎಲ್ಲ ಬೇಡಿಕೆಗಳನ್ನು ಏಮ್ಸ್ ಆಡಳಿತ ಮತ್ತು ಸರ್ಕಾರ ಈಡೇರಿಸಿದೆ. ಕೋವಿಡ್ ಸಮಯದಲ್ಲಿ ಮುಷ್ಕರ ನಡೆಸದಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.