ಆಂಧ್ರ - ಒಡಿಶಾ ಗಡಿಯಲ್ಲಿ ಕಾಡಾನೆ ಹಾವಳಿ: ಆನೆ ದಾಳಿಗೆ ಓರ್ವನಿಗೆ ಗಾಯ - ಆನೆ ದಾಳಿಯಲ್ಲಿ ಓರ್ವನಿಗೆ ಗಾಯ
🎬 Watch Now: Feature Video
ಆಂಧ್ರಪ್ರದೇಶ: ಇಲ್ಲಿನ ಆಂಧ್ರ - ಒಡಿಶಾ ಗಡಿಭಾಗದಲ್ಲಿ ಕಳೆದ 15 ದಿನಗಳಿಂದ ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು, ಈ ನಡುವೆ ವ್ಯಕ್ತಿಯೋರ್ವನ ಮೇಲೆ ಒಂಟಿ ಆನೆಯೊಂದು ದಾಳಿ ಮಾಡಿದೆ. ಗಡಿ ಭಾಗದ ಸನ್ನಾಪುರಂನಲ್ಲಿ ಆನೆ ವ್ಯಕ್ತಿಯನ್ನು ಕಾಲಿನಿಂದ ತುಳಿದು ದಾಳಿ ಮಾಡಿದ್ದು, ಆನೆ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಅರಣ್ಯ ಇಲಾಖೆ ತಕ್ಷಣ ಆನೆಗಳನ್ನು ಮರಳಿ ಕಾಡಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.