ಏಕಾಏಕಿ ಹೊತ್ತಿ ಉರಿದ ಕಾರು... ಹೊರಬರಲಾರದೇ ಕೂತಲ್ಲೇ ಸುಟ್ಟು ಶವವಾದ ವ್ಯಕ್ತಿ! - ಏಕಾಏಕಿ ಹೊತ್ತಿ ಉರಿದ ಕಾರು
🎬 Watch Now: Feature Video

ತ್ರಿಶೂರ್: ಏಕಾಏಕಿ ಕಾರು ಹೊತ್ತಿ ಉರಿದ ಕಾರಣ ಅದರೊಳಗಿದ್ದ ವ್ಯಕ್ತಿಯೋರ್ವ ಹೊರಬಲಾರದೆ ಸುಟ್ಟು ಶವವಾಗಿರುವ ಘಟನೆ ತ್ರಿಶೂರ್ದ ಕೊಡುಂಗಲ್ಲೂರ್ ಬಳಿಕ ಚಂತಪ್ಪುರ್-ಕೊಟ್ಟಪ್ಪುರಂ ಬೈಪಾಸ್ ರಸ್ತೆ ಬಳಿ ನಡೆದಿದೆ. ಕಾರಿನಲ್ಲಿ ಪೆಟ್ರೋಲ್ ಇಟ್ಟುಕೊಂಡಿದ್ದ ಬಾಟಲಿ ವಶಪಡಿಸಿಕೊಳ್ಳಲಾಗಿದ್ದು, ಕಾರಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ವ್ಯಕ್ತಿಯ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.