ಮಮತಾ ಬ್ಯಾನರ್ಜಿಯನ್ನು ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿರಿಸಬೇಕು: ಸ್ವಾಮಿ ನರೇಂದ್ರಾನಂದ ಸರಸ್ವತಿ - ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
🎬 Watch Now: Feature Video
ವಾರಣಾಸಿ(ಉತ್ತರ ಪ್ರದೇಶ): ಸುಭಾಷ್ ಚಂದ್ರ ಬೋಸ್ ಜನ್ಮದಿನದ ನಿಮಿತ್ತ ಕೋಲ್ಕತ್ತಾದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಎಂಬ ಘೋಷಣೆ ಕೇಳಿ ಬರುತ್ತಿದ್ದಂತೆ ಆಕ್ರೋಶಗೊಂಡ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೈ ಹಿಂದ್, ಜೈ ಬಾಂಗ್ಲಾ ಎಂದು ಘೋಷಣೆ ಕೂಗಿ ಸಭೆಯಿಂದ ಹೊರನಡೆದಿದ್ದರು. ದೀದಿಯ ನಡೆಯನ್ನು ಟೀಕಿಸಿರುವ ಕಾಶಿ ಸುಮೇರು ಪೀಠಾಧೀಶ್ವರ ಸ್ವಾಮಿ ನರೇಂದ್ರಾನಂದ ಸರಸ್ವತಿ, ಇದು ಹುಚ್ಚುತನದ ಸಂಕೇತ, ವಿಕೃತ ಮನಸ್ಥಿತಿಯ ಪ್ರತಿಬಿಂಬವಾಗಿದೆ. ಇವರನ್ನು ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿರಿಸಬೇಕು. ರಾಮ-ಸೀತೆಯ ಹೆಸರು ಉಚ್ಛರಿಸಿದರೆ ಮಮತಾರ ಬುದ್ಧಿಶಕ್ತಿಯೂ ಶುದ್ಧವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.