ಕೇರಳದ ಪಾಲಕ್ಕಾಡ್ನಲ್ಲಿ ಬೆಂಕಿಯಿಂದ ಧಗಧಗಿಸಿದ ರೆಸ್ಟೋರೆಂಟ್ - Palakkad, Kerala
🎬 Watch Now: Feature Video
ಪಾಲಕ್ಕಾಡ್: ಇಲ್ಲಿನ ಸ್ಟೇಡಿಯಂ ಬಸ್ ಸ್ಟ್ಯಾಂಡ್ ರಸ್ತೆಯ ನೂರ್ಜಹಾನ್ ಓಪನ್ ಗ್ರಿಲ್ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವು - ನೋವು ವರದಿಯಾಗಿಲ್ಲ. ಹೋಟೆಲ್ ಒಳಗೆ ಇದ್ದವರನ್ನು ಘಟನೆ ಸಂಭವಿಸಿದ ಕೂಡಲೇ ಸ್ಥಳಾಂತರಿಸಲಾಗಿದೆ. ಬೆಂಕಿಯಿಂದ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದೆ. ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹೋಟೆಲ್‌ನಲ್ಲಿದ್ದ ಗ್ಯಾಸ್ ಸಿಲಿಂಡರ್‌ಗಳನ್ನು ಸ್ಥಳಾಂತರಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.