ಲಾಕ್​ಡೌನ್​ ವೇಳೆ ವಿಭಿನ್ನ ಸಂಗೀತ ವಿಡಿಯೋ ರಚಿಸಿ ನೆಟ್ಟಿಗರ ಮನಗೆದ್ದ ಕೇರಳ ವಿದ್ಯಾರ್ಥಿಗಳು

By

Published : May 2, 2020, 1:46 PM IST

thumbnail

ಮಲಪ್ಪುರಂ(ಕೇರಳ): ಸಂಗೀತ ವಿದ್ಯಾರ್ಥಿಗಳ ದೈನಂದಿನ ಅಭ್ಯಾಸವನ್ನು ಲಾಕ್​ಡೌನ್​ ಕಸಿದುಕೊಂಡಿದ್ದು, ಇದಕ್ಕಾಗಿ ಈ ಸಂಗೀತ ವಿದ್ಯಾರ್ಥಿಗಳ ತಂಡವು ವಿಭಿನ್ನವಾಗಿ ಯೋಚಿಸಿ ನೆಟ್ಟಿಗರ ಮನಗೆದ್ದಿದೆ. ಮಲಪುರಂನ ಚುಂಗಥರ ಮಾರ್ಥೋಮಾ ಪ್ರೌಢಶಾಲೆಯ ವೃಂದಾವದ್ಯಂ ತಂಡದ ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ಮಾಡಲು ಒಂದೆಡೆ ಸೇರಲಾಗದೆ, ಆನ್​ಲೈನ್​ನಲ್ಲೇ ಎಲ್ಲರೂ ಸೇರಿ ವಿಡಿಯೋ ಹಾಡೊಂದನ್ನು ರಚಿಸಿದ್ದಾರೆ. ತಮಿಳಿನ ಬಿಗಿಲ್​ ಚಿತ್ರದ ಹಾಡೊಂದನ್ನು ಆಯ್ಕೆ ಮಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಸಂಗೀತ ವಾದ್ಯದೊಂದಿಗೆ ಮನೆಯಲ್ಲೇ ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಬಳಿಕ ಅದನ್ನು ತಂಡದ ನಾಯಕನಿಗೆ ಕಳಿಸಿ ವಿಡಿಯೋ ಎಡಿಟಿಂಗ್​ ಮೂಲಕ ಜೋಡಿಸಿದ್ದಾರೆ. ಈ ವಿಡಿಯೋ ಯೂಟ್ಯೂಬ್​ನಲ್ಲಿ ಅಪ್ಲೋಡ್​ ಮಾಡಲಾಗಿದ್ದು, ಭಾರಿ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.